KEA ನೇಮಕಾತಿ ; ಕಾರಾಗೃಹ ಇಲಾಖೆಯಲ್ಲಿ 869 ಹುದ್ದೆಗಳಿಗೆ ಅರ್ಜಿ ಆಹ್ವಾನ ; ‘SSLC, ಡಿಗ್ರಿ’ ಆಗಿದ್ರೆ ತಕ್ಷಣ ಅಪ್ಲೈ ಮಾಡಿ!
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಪೊಲೀಸ್ ಇಲಾಖೆಯಲ್ಲಿ ಕೆಲಸದ ಕನಸು ಕಾಣುವ ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿ ನೀಡಿದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್ (Jailor) ಮತ್ತು ಜೈಲ್ ಪೊಲೀಸ್ / ವಾರ್ಡರ್ (Warder) ಹುದ್ದೆಗಳಿಗೆ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ವಿವರ.!
ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಾರ್ಡರ್ ಮತ್ತು ದ್ವಿತೀಯ ದರ್ಜೆ ಬೋಧಕರು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ.
ಜೈಲರ್ : 05ವಾರ್ಡರ್ (ವೀಕ್ಷಕರು) : 275
ದ್ವಿತೀಯ ದರ್ಜೆ ಬೋಧಕರು (Instructor Grade-II) : 08
ವಾರ್ಡರ್ ಕಮ್ ನರ್ಸಿಂಗ್ : 05
ಒಟ್ಟು ಹುದ್ದೆಗಳ ಸಂಖ್ಯೆ : 293
ವೇತನ ಶ್ರೇಣಿ.!
ಜೈಲರ್ : 61,300-1,12,900/- ವಾರ್ಡರ್ (ವೀಕ್ಷಕರು) : 37,500-76,100/-ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/- ವಾರ್ಡರ್ ಕಮ್ ನರ್ಸಿಂಗ್ : 34,100-67,600/-
ಮೂಲ ವೃಂದದಲ್ಲಿ ವಾರ್ಡರ್ ಮತ್ತು ದ್ವಿತೀಯ ದರ್ಜೆ ಬೋಧಕರು ಹುದ್ದೆಗಳ ವಿವರ ಈ ಕೆಳಗಿನಂತಿದೆ.
ವಾರ್ಡರ್ (ವೀಕ್ಷಕರು) : 560
ದ್ವಿತೀಯ ದರ್ಜೆ ಬೋಧಕರು : 16
ಒಟ್ಟು ಹುದ್ದೆಗಳ ಸಂಖ್ಯೆ : 576
ವೇತನ ಶ್ರೇಣಿ.!
ವಾರ್ಡರ್ (ವೀಕ್ಷಕರು) : 37,500-76,100/-ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/-
ವಿದ್ಯಾರ್ಹತೆ.!
ಜೈಲರ್ : ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
ನಾರ್ಡರ್ (ವೀಕ್ಷಕರು) : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ದ್ವಿತೀಯ ದರ್ಜೆ ಬೋಧಕರು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟ್ರಿ/ಟೈಲರಿಂಗ್/ಜವಳಿ/ನೇಯ್ಗೆ/ಕಾರ್ಪೆಟ್ ತಯಾರಿಕೆ ಇತ್ಯಾದಿಗಳಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು.
ವಾರ್ಡರ್ ಕಮ್ ನರ್ಸಿಂಗ್ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಥಮ ಚಿಕಿತ್ಸೆಯಲ್ಲಿ ಪ್ರಮಾಣೀಕರಿಸಲ್ಪಟ್ಟಿರಬೇಕು.
ವಯೋಮಿತಿ.!
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
* ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳು ಇರಬೇಕು.
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 29 ವರ್ಷಗಳು.
* SC, ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷಗಳು.
ಅನ್ ಲೈನ್’ನಲ್ಲಿ ಸಲ್ಲಿಸಿದ ಅರ್ಜಿಗಳು ಮಾತ್ರ ಸ್ವೀಕರಿಸಲಿದ್ದು, ಆಸಕ್ತರು KEA ಅಧಿಕೃತ ವೆಬ್ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನೆನಪಿಟ್ಟುಕೊಳ್ಳಬೇಕಾದ ದಿನಾಂಕಗಳು.!
ಅರ್ಜಿ ಸಲ್ಲಿಕೆ ಪ್ರಾರಂಭ : 19.09.2026
ಅರ್ಜಿ ಸಲ್ಲಿಸಲು ಕೊನೆಯ ದಿನ : 15.10.2026
ಶುಲ್ಕ ಪಾವತಿಗೆ ಕೊನೆ ದಿನಾಂಕ : 16.10.2026