JobsNationalState

ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ ; ರೈಲ್ವೆಯಲ್ಲಿ 5,165 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡದಲ್ಲೇ ಪರೀಕ್ಷೆ!

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್: ದೇಶದ ನಿರುದ್ಯೋಗಿ ಯುವಕರಿಗೆ ಬೃಹತ್ ಸಿಹಿ ಸುದ್ದಿ ನೀಡಿರುವ ರೈಲ್ವೆ ನೇಮಕಾತಿ ಮಂಡಳಿಯು (RRB), 2026ನೇ ಸಾಲಿನ ಎನ್‌ಟಿಪಿಸಿ (NTPC) ಅಡಿಯಲ್ಲಿ ಪದವೀಧರ ಹಾಗೂ ಪಿಯುಸಿ (ಅಂಡರ್-ಗ್ರಾಜುಯೇಟ್) ಮಟ್ಟದ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಗಳನ್ನ ಹೊರಡಿಸಿದೆ. ಒಟ್ಟು 5,165 ಹುದ್ದೆಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಆನ್‌ಲೈನ್ ಅರ್ಜಿಗಳನ್ನ ಆಹ್ವಾನಿಸಲಾಗಿದೆ.

1. ಪದವೀಧರ ಮಟ್ಟದ ಹುದ್ದೆಗಳು (Graduate Level – CEN 06/2026).!

ಒಟ್ಟು ಹುದ್ದೆಗಳು : 3,477

ಮುಖ್ಯಾಂಶಗಳು : ಗೂಡ್ಸ್ ಟ್ರೈನ್ ಮ್ಯಾನೇಜರ್ (2,750 ಹುದ್ದೆಗಳು), ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಸೇರಿವೆ.

ವಿದ್ಯಾರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಕೆ ದಿನಾಂಕ : 08 ಅಕ್ಟೋಬರ್ 2026 ರಿಂದ 06 ನವೆಂಬರ್ 2026 ರವರೆಗೆ.

2. ಪಿಯುಸಿ / ಅಂಡರ್-ಗ್ರಾಜುಯೇಟ್ ಮಟ್ಟದ ಹುದ್ದೆಗಳು (UG Level – CEN 07/2026).!

ಒಟ್ಟು ಹುದ್ದೆಗಳು : 1,688

ಹುದ್ದೆಯ ವಿವರಗಳು.!

ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (CCTC) – 700 ಹುದ್ದೆಗಳು

ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 600 ಹುದ್ದೆಗಳು

ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ – 200 ಹುದ್ದೆಗಳು

ಟ್ರೈನ್ಸ್ ಕ್ಲರ್ಕ್ – 188 ಹುದ್ದೆಗಳು

ವಿದ್ಯಾರ್ಹತೆ : ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ (12th Pass) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕ್ಲರ್ಕ್ ಹುದ್ದೆಗಳಿಗೆ ಕಂಪ್ಯೂಟರ್ ಟೈಪಿಂಗ್ ಕೌಶಲ್ಯ ಕಡ್ಡಾಯವಾಗಿರುತ್ತದೆ.

ಅರ್ಜಿ ಸಲ್ಲಿಕೆ ದಿನಾಂಕ : 15 ಅಕ್ಟೋಬರ್ 2026 ರಿಂದ 13 ನವೆಂಬರ್ 2026 ರವರೆಗೆ.

ಪ್ರಮುಖ ವಿವರಗಳು.!

ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ರಿಂದ 33 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ (ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ). ವಯಸ್ಸನ್ನು 2027ರ ಜನವರಿ 1ಕ್ಕೆ ಅನ್ವಯಿಸಿ ಲೆಕ್ಕಹಾಕಲಾಗುತ್ತದೆ.

ಆಯ್ಕೆ ಪ್ರಕ್ರಿಯೆ : ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1), ಎರಡನೇ ಹಂತದ ಪರೀಕ್ಷೆ (CBT-2), ಟೈಪಿಂಗ್ ಸ್ಕಿಲ್ ಟೆಸ್ಟ್ / ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (ಅನ್ವಯವಾಗುವ ಹುದ್ದೆಗಳಿಗೆ), ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಅರ್ಜಿ ಶುಲ್ಕ ಮತ್ತು

ಮರುಪಾವತಿ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹ 500 (ಪರೀಕ್ಷೆಗೆ ಹಾಜರಾದ ನಂತರ ₹ 400 ಮರುಪಾವತಿಸಲಾಗುತ್ತದೆ). ಎಸ್‌ಸಿ, ಎಸ್‌ಟಿ, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 250 ಶುಲ್ಕವಿದ್ದು, ಪರೀಕ್ಷೆಗೆ ಹಾಜರಾದ ಬಳಿಕ ಸಂಪೂರ್ಣ ಶುಲ್ಕ ಮರುಪಾವತಿಯಾಗಲಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *