StateJobs

KEA ನೇಮಕಾತಿ ; ಕಾರಾಗೃಹ ಇಲಾಖೆಯಲ್ಲಿ 869 ಹುದ್ದೆಗಳಿಗೆ ಅರ್ಜಿ ಆಹ್ವಾನ ; ‘SSLC, ಡಿಗ್ರಿ’ ಆಗಿದ್ರೆ ತಕ್ಷಣ ಅಪ್ಲೈ ಮಾಡಿ!

Spread the love

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಪೊಲೀಸ್ ಇಲಾಖೆಯಲ್ಲಿ ಕೆಲಸದ ಕನಸು ಕಾಣುವ ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿ ನೀಡಿದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್ (Jailor) ಮತ್ತು ಜೈಲ್ ಪೊಲೀಸ್ / ವಾರ್ಡರ್ (Warder) ಹುದ್ದೆಗಳಿಗೆ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ವಿವರ.!

ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಾರ್ಡರ್ ಮತ್ತು ದ್ವಿತೀಯ ದರ್ಜೆ ಬೋಧಕರು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ.

ಜೈಲರ್ : 05ವಾರ್ಡರ್ (ವೀಕ್ಷಕರು) : 275

ದ್ವಿತೀಯ ದರ್ಜೆ ಬೋಧಕರು (Instructor Grade-II) : 08

ವಾರ್ಡರ್ ಕಮ್ ನರ್ಸಿಂಗ್ : 05

ಒಟ್ಟು ಹುದ್ದೆಗಳ ಸಂಖ್ಯೆ : 293

ವೇತನ ಶ್ರೇಣಿ.!

ಜೈಲರ್ : 61,300-1,12,900/- ವಾರ್ಡರ್ (ವೀಕ್ಷಕರು) : 37,500-76,100/-ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/- ವಾರ್ಡರ್ ಕಮ್ ನರ್ಸಿಂಗ್ : 34,100-67,600/-

ಮೂಲ ವೃಂದದಲ್ಲಿ ವಾರ್ಡರ್ ಮತ್ತು ದ್ವಿತೀಯ ದರ್ಜೆ ಬೋಧಕರು ಹುದ್ದೆಗಳ ವಿವರ ಈ ಕೆಳಗಿನಂತಿದೆ.

ವಾರ್ಡರ್ (ವೀಕ್ಷಕರು) : 560

ದ್ವಿತೀಯ ದರ್ಜೆ ಬೋಧಕರು : 16

ಒಟ್ಟು ಹುದ್ದೆಗಳ ಸಂಖ್ಯೆ : 576

ವೇತನ ಶ್ರೇಣಿ.!

ವಾರ್ಡರ್ (ವೀಕ್ಷಕರು) : 37,500-76,100/-ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/-

ವಿದ್ಯಾರ್ಹತೆ.!

ಜೈಲರ್ : ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ನಾರ್ಡರ್ (ವೀಕ್ಷಕರು) : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ದ್ವಿತೀಯ ದರ್ಜೆ ಬೋಧಕರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟ್ರಿ/ಟೈಲರಿಂಗ್/ಜವಳಿ/ನೇಯ್ಗೆ/ಕಾರ್ಪೆಟ್ ತಯಾರಿಕೆ ಇತ್ಯಾದಿಗಳಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು.

ವಾರ್ಡರ್ ಕಮ್ ನರ್ಸಿಂಗ್ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಥಮ ಚಿಕಿತ್ಸೆಯಲ್ಲಿ ಪ್ರಮಾಣೀಕರಿಸಲ್ಪಟ್ಟಿರಬೇಕು.

ವಯೋಮಿತಿ.!

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

* ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳು ಇರಬೇಕು.

* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 29 ವರ್ಷಗಳು.

* SC, ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷಗಳು.

ಅನ್ ಲೈನ್’ನಲ್ಲಿ ಸಲ್ಲಿಸಿದ ಅರ್ಜಿಗಳು ಮಾತ್ರ ಸ್ವೀಕರಿಸಲಿದ್ದು, ಆಸಕ್ತರು KEA ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ನೆನಪಿಟ್ಟುಕೊಳ್ಳಬೇಕಾದ ದಿನಾಂಕಗಳು.!

ಅರ್ಜಿ ಸಲ್ಲಿಕೆ ಪ್ರಾರಂಭ : 19.09.2026

ಅರ್ಜಿ ಸಲ್ಲಿಸಲು ಕೊನೆಯ ದಿನ : 15.10.2026

ಶುಲ್ಕ ಪಾವತಿಗೆ ಕೊನೆ ದಿನಾಂಕ : 16.10.2026

ಪರೀಕ್ಷಾ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುತ್ತದೆ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ : ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌’ನಲ್ಲಿ ಪ್ರಕಟಿಸಲಾದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ವಿವಿಧ ವೃಂದಗಳ ಒಟ್ಟು ಹುದ್ದೆಗಳ ವಿವರ, ವಯೋಮಿತಿ ಸಡಿಲಿಕೆ ಮತ್ತು ದಾಖಲೆಗಳ ಪರಿಶೀಲನೆಯ ನಿಖರ ದಿನಾಂಕಗಳನ್ನು ಪರಿಶೀಲಿಸಿ, ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಈ ರೀತಿಯ ತಾಜಾ ಸರ್ಕಾರಿ ಉದ್ಯೋಗ ನೇಮಕಾತಿಗಳ ಮಾಹಿತಿಗಾಗಿ ದಿನಲೂ ನಮ್ಮ ಸುದ್ದಿತಾಣಕ್ಕೆ ಭೇಟಿ ನೀಡಿ.

Leave a Reply

Your email address will not be published. Required fields are marked *