National

‘LoC’ ತೊಲಗಿಸಿ ಭಾರತದೊಂದಿಗೆ ವಿಲೀನಗೊಳಿಸಿ ; ‘PoK’ಯಲ್ಲಿ ಜೋರಾಯ್ತು ಚಳುವಳಿ!

Spread the love

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಪಾಕಿಸ್ತಾನ ಆಡಳಿತದಲ್ಲಿರುವ ಕಾಶ್ಮೀರದಲ್ಲಿ (LoC) ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಸೆಪ್ಟೆಂಬರ್ 26ರಂದು, ಪೂಂಚ್ ಜಿಲ್ಲೆಯ ಮಾಂಧೋಲ್ ಪ್ರದೇಶದಲ್ಲಿ ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಬೃಹತ್ ಧರಣಿ ಆಯೋಜಿಸಿದ್ದು, ಇದ್ರಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆಂದು ವರದಿಯಾಗಿದೆ. ಅಂದ್ಹಾಗೆ, ಜೆಎಎಸಿ ಕೆಲವು ಸಮಯದಿಂದ ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಹಕ್ಕುಗಳ ಜೊತೆಗೆ ಪ್ರಾದೇಶಿಕ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತಿದೆ.

ಇತ್ತೀಚಿನ ಧರಣಿಯಲ್ಲಿ ಜೆಎಸಿ ನಾಯಕ ಸರ್ದಾರ್ ಅಮನ್ ಖಾನ್ ಪ್ರಮುಖ ಹೇಳಿಕೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಭಾರತದ ಜಮ್ಮು ಮತ್ತು ಕಾಶ್ಮೀರದ ನಡುವಿನ ನಿಯಂತ್ರಣ ರೇಖೆಯನ್ನು (LoC) ತೆಗೆದುಹಾಕಬೇಕು ಮತ್ತು ಪೂಂಚ್-ಮೆಂಧರ್ ಮಾರ್ಗಗಳನ್ನ ಮತ್ತೆ ತೆರೆಯಬೇಕೆಂದು ಒತ್ತಾಯಿಸಿದರು. ನಾವು ಭಾರತದೊಂದಿಗೆ ವಿಲೀನವಾಗಬೇಕೇ? ಬೇಡವೇ? ಎಂದು ಅವ್ರು ಜನಸಮೂಹವನ್ನು ಕೇಳಿದರು. ಈ ಪ್ರಸ್ತಾಪಗಳಿಗೆ ಜನರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿದೆ. ಇದರೊಂದಿಗೆ, ಭಾರತದೊಂದಿಗೆ ಪುನರೇಕೀಕರಣಕ್ಕಾಗಿ ಪಿಒಕೆ ಚಳುವಳಿಯನ್ನ ತೀವ್ರಗೊಳಿಸಲು ಜೆಎಸಿ ನಿರ್ಧರಿಸಿದೆ.

ಪಡಿತರ ವಿತರಣೆ ಸ್ಥಗಿತಕ್ಕೆ ಆಕ್ರೋಶ.!
ಪಿಒಕೆಯಲ್ಲಿ ಆಹಾರ ಪೂರೈಕೆ ಮತ್ತು ಪಡಿತರ ಮೇಲೆ ನಿರ್ಬಂಧಗಳಿವೆ ಎಂದು ಜೆಎಸಿ ನಾಯಕರು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಹಿಂದೆಯೂ ಪ್ರತಿಭಟನೆಗಳು ನಡೆದಿವೆ. ಜೂನ್‌’ನಲ್ಲಿ, ಪಡಿತರ, ಹಿಟ್ಟು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯ ಮೇಲಿನ ನಿರ್ಬಂಧಗಳ ವಿರುದ್ಧ ಪ್ರತಿಭಟನಾಕಾರರು ಪ್ರತಿಭಟಿಸಿದರು. ಆದಾಗ್ಯೂ, ಪಾಕಿಸ್ತಾನಿ ಅಧಿಕಾರಿಗಳು ಜೆಎಸಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ, ಪ್ರತಿಭಟನೆಗಳ ಹಿಂದೆ ರಾಜಕೀಯ ಮತ್ತು ಭದ್ರತಾ ಉದ್ದೇಶಗಳಿವೆ ಎಂದು ಹೇಳಿದ್ದಾರೆ.

ಪಿಒಕೆ ಪ್ರದೇಶದಲ್ಲಿ ತೀವ್ರಗೊಂಡಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆ!
ಪಾಕಿಸ್ತಾನ ದುರ್ಬಲ ಆಡಳಿತದ ಅಡಿಯಲ್ಲಿರುವ ಕಾಶ್ಮೀರದಲ್ಲಿ ಕಳೆದ ಹಲವು ತಿಂಗಳುಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಅಗತ್ಯ ವಸ್ತುಗಳಾದ ಗೋಧಿ ಹಿಟ್ಟು, ಅಡುಗೆ ಅನಿಲ ಮತ್ತು ವಿದ್ಯುತ್ ದರಗಳಲ್ಲಿ ಭಾರಿ ಏರಿಕೆಯಾಗಿರುವುದು ಸಾಮಾನ್ಯ ಜನರ ಬದುಕನ್ನು ದುಸ್ತರಗೊಳಿಸಿದೆ. ಸ್ಥಳೀಯ ಜಲವಿದ್ಯುತ್ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಅಲ್ಲಿನ ಜನರಿಗೆ ಕಡಿಮೆ ದರದಲ್ಲಿ ನೀಡದೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ರೋಶವಾಗಿದೆ.

ಮೂಲಭೂತ ಹಕ್ಕುಗಳಿಗಾಗಿ ಸ್ಥಳೀಯರ ನಿರಂತರ ಹೋರಾಟ!
ಅಭಿವೃದ್ಧಿ ಕಾರ್ಯಗಳ ನಿರ್ಲಕ್ಷ್ಯ ಮತ್ತು ನಿರುದ್ಯೋಗ ಸಮಸ್ಯೆಯಿಂದ ಬೇಸತ್ತಿರುವ ಯುವಕರು ಹಾಗೂ ವ್ಯಾಪಾರಿಗಳು ಬೀದಿಗಿಳಿದು ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಾರೆ. ಗಡಿ ನಿಯಂತ್ರಣ ರೇಖೆಯ (LoC) ಎರಡೂ ಬದಿಗಳಲ್ಲಿರುವ ಕುಟುಂಬಗಳ ನಡುವೆ ಮುಕ್ತ ಸಂಚಾರ ಮತ್ತು ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಗಳು ಮತ್ತಷ್ಟು ಬಲಗೊಂಡಿವೆ.

ಆಡಳಿತದ ಪ್ರತಿಕ್ರಿಯೆ ಮತ್ತು ಭದ್ರತಾ ವ್ಯವಸ್ಥೆ!
ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಜನರ ಬೇಡಿಕೆಗಳ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹೆಚ್ಚಿನ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸುದ್ದಿಗಳಿಗಾಗಿ, ಅಧಿಕೃತ ಸರ್ಕಾರಿ ಯೋಜನೆಗಳ ನಿಖರ ಮಾಹಿತಿ, ಉದ್ಯೋಗ ಸುದ್ದಿಗಳು ಮತ್ತು ತಾಜಾ ಅಪ್‌ಡೇಟ್‌ ಮತ್ತು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಸುದ್ದಿತಾಣವನ್ನು ದಿನಾಲೂ ಭೇಟಿ ಮಾಡಿ.

Leave a Reply

Your email address will not be published. Required fields are marked *