ಪಿಎಂ ಕಿಸಾನ್ ಯೋಜನೆಯ ₹2,000 ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ದುಡ್ಡು ಜಮೆಯಾಗಿಲ್ವಾ? ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ
ಬೆಂಗಳೂರು : ದೇಶದ ಹಾಗೂ ರಾಜ್ಯದ ಅನ್ನದಾತರಿಗೆ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕೂ ಮುನ್ನವೇ ಭರ್ಜರಿ ಗಿಫ್ಟ್ ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi 2026) ಯೋಜನೆಯ ಅಡಿಯಲ್ಲಿ ನಿನ್ನೆಯಷ್ಟೇ (ಅಕ್ಟೋಬರ್ 30) ಅಧಿಕೃತವಾಗಿ ₹2,000 ಹಣದ ಹೊಸ ಕಂತನ್ನು ಬಿಡುಗಡೆ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ನ ಬನಸ್ಕಾಂತದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತನ್ನು ಬಿಡುಗಡೆ ಮಾಡಿದರು. ಈ ಕಂತಿನಲ್ಲಿ 9.34 ಕೋಟಿ ರೈತರ ಖಾತೆಗಳಿಗೆ ಒಟ್ಟು ₹18,690 ಕೋಟಿ ಹಣ ವರ್ಗಾಯಿಸಲಾಗಿದೆ. ಅದರಂತೆ, ನೇರ ನಗದು ವರ್ಗಾವಣೆ (DBT) ಮೂಲಕ ಕೋಟ್ಯಂತರ ರೈತರ ಖಾತೆಗಳಿಗೆ ಹಣ ಜಮೆಯಾಗುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಆದರೆ, ರಾಜ್ಯದ ಅನೇಕ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಇನ್ನು ಕೂಡ ಈ ಇತ್ತೀಚಿನ ಕಂತಿನ ಹಣ ಜಮೆಯಾಗಿಲ್ಲ. ಒಂದು ವೇಳೆ ನಿನ್ನೆಯೇ ಹಣ ಬಿಡುಗಡೆಯಾಗಿದ್ದರೂ ನಿಮ್ಮ ಖಾತೆಗೆ ಇನ್ನು ₹2,000 ದುಡ್ಡು ಬಂದಿಲ್ಲವೆಂದರೆ, ನೀವು ತಕ್ಷಣವೇ ಕೆಳಗಿನ ಕಾರಣಗಳನ್ನು ಪರಿಶೀಲಿಸಿ ಈ ಪ್ರಮುಖ ಕೆಲಸವನ್ನು ಮಾಡಬೇಕಾಗುತ್ತದೆ.
ನಿಮ್ಮ ಖಾತೆಗೆ ಇನ್ನು ಹಣ ಬಂದಿಲ್ಲವೆಂದರೆ ತಕ್ಷಣ ಹೀಗೆ ಮಾಡಿ!
1. ಇ-ಕೆವೈಸಿ (e-KYC) ಸ್ಟೇಟಸ್ ಪರಿಶೀಲಿಸಿ: ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಇ-ಕೆವೈಸಿ ಅಪೂರ್ಣವಾಗಿದ್ದರೆ ಹಣ ಬರುವುದಿಲ್ಲ. ಇದನ್ನು ಪರಿಶೀಲಿಸಲು ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ, ‘e-KYC’ ಆಪ್ಷನ್ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ನೀಡಿ ತಕ್ಷಣವೇ ಅಪ್ಡೇಟ್ ಮಾಡಿಕೊಳ್ಳಿ.
2. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhar Seeding / NPCI) : ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಎನ್ಪಿಸಿಐ (NPCI) ಮ್ಯಾಪಿಂಗ್ ಸಕ್ರಿಯವಾಗಿರಬೇಕು. ಇದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಧಾರ್ ಸೀಡಿಂಗ್ ಫಾರ್ಮ್ ತುಂಬಿ ನೀಡಿ ಅಥವಾ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ IPPB (India Post Payments Bank) ಹೊಸ ಖಾತೆ ತೆರೆಯಿರಿ. ಇದರಿಂದ ಮುಂದಿನ ಕಂತಿನ ಹಣ ನೇರವಾಗಿ ಜಮೆಯಾಗುತ್ತದೆ.
3. ಜಮೀನಿನ ಪಹಣಿ ದಾಖಲಾತಿ (Land Seeding): ನಿಮ್ಮ ಜಮೀನಿನ ಜಂಟಿ ಖಾತೆ ಅಥವಾ ತಾಂತ್ರಿಕ ಕಾರಣಗಳಿಂದ ಪೋರ್ಟಲ್ನಲ್ಲಿ ‘Land Seeding’ ಜಾಗದಲ್ಲಿ ‘NO’ ಎಂದು ಇದ್ದರೆ ಹಣ ಸ್ಥಗಿತಗೊಳ್ಳುತ್ತದೆ. ಇದನ್ನು ಸರಿಪಡಿಸಲು ನಿಮ್ಮ ಭಾಗದ ಕೃಷಿ ಇಲಾಖೆ ಅಧಿಕಾರಿಗಳನ್ನು (Raihta Mitra) ಭೇಟಿ ಮಾಡಿ ನಿಮ್ಮ ಪಹಣಿ (RTC) ದಾಖಲೆಯನ್ನು ಮರು-ಅಪ್ಲೋಡ್ ಮಾಡಿಸಬೇಕಾಗುತ್ತದೆ.
ರೈತರು ಮೊದಲು ಪೋರ್ಟಲ್ನ ‘Know Your Status’ ವಿಭಾಗಕ್ಕೆ ಭೇಟಿ ನೀಡಿ ತಮ್ಮ ನೋಂದಣಿ ಸಂಖ್ಯೆ ಬಳಸಿ ತಮ್ಮ ಖಾತೆಯ ಸ್ಟೇಟಸ್ ಏನೆಂಬುದನ್ನು ಪರಿಶೀಲಿಸಿಕೊಳ್ಳಲು ಕೃಷಿ ಇಲಾಖೆ ಸೂಚಿಸಿದೆ. ಅದ್ರಂತೆ, ಮನೆಯಲ್ಲೇ ಕುಳಿತು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ pmkisan.gov.in ಮೂಲಕ ಹಣದ ಸ್ಥಿತಿ ತಿಳಿದುಕೊಳ್ಳಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನ ಅನುಸರಿಸಿ.
- ಮೊದಲು ಪಿಎಂ ಕಿಸಾನ್ (PM-KISAN) ಅಧಿಕೃತ ವೆಬ್ಸೈಟ್ ತೆರೆಯಿರಿ.
- ಮುಖಪುಟದಲ್ಲಿರುವ ‘Farmers Corner’ ವಿಭಾಗಕ್ಕೆ ಹೋಗಿ.
- ಅಲ್ಲಿ ಕಾಣಿಸುವ ‘Know Your Status’ ಆಯ್ಕೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
- ನಂತರ ‘Get OTP’ ಆಯ್ಕೆ ಕ್ಲಿಕ್ಕಿಸಿ.
- ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ.
- ‘Submit’ ಕ್ಲಿಕ್ ಮಾಡಿದ್ಮೇಲೆ ಕಂತಿನ ವಿವರಗಳನ್ನ ಪರಿಶೀಲಿಸಿ.
- ಬಳಿಕ ಕಂತು ಪಾವತಿ ಸ್ಥಿತಿ ಆಯ್ಕೆ ಮಾಡಿಕೊಂಡು ಹಣ ಜಮೆಯಾಗಿರುವ ಮಾಹಿತಿ ತಿಳಿಯಿರಿ.
ಅಂದ್ಹಾಗೆ, ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದೆ. ಇದರ ಅಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6,000/- ಆರ್ಥಿಕ ನೆರವು ನೀಡಲಾಗುತ್ತದೆ. ಈ ಹಣವನ್ನ ತಲಾ ₹2,000ರಂತೆ ಮೂರು ಸಮಾನ ಕಂತುಗಳಲ್ಲಿ (ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್) ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
