ನಟ ‘ಕಿರಣ್ ರಾಜ್’ ಜೀವನದ ಆಸಕ್ತಿದಾಯಕ ವಿಷಯಗಳು
ಸ್ನೇಹಿತರೆ, ನಮಸ್ಕಾರ.. ಕರ್ಣ ಸೀರಿಯಲ್ ನಟ ಕಿರಣ್ ರಾಜ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ತುಂಬಾನೇ ಚರ್ಚೆಯಾಗ್ತಿದೆ. ಅವ್ರು ಹುಟ್ಟುತ್ಲೆ ಆಗರ್ಭ ಶ್ರೀಮಂತ, ಸಧ್ಯ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಕಿರುತೆರೆ ನಟ ಅನ್ನೋ ಸುದ್ದಿಗಳು ಓಡಾಡುತ್ತಿವೆ. ಹಾಗಿದ್ರೆ, ನಿಜಕ್ಕೂ ಕಿರಣ್ ರಾಜ್ ಕೋಟ್ಯಾಧಿಪತಿಯಾ.? ಬನ್ನಿ, ಈ ವಿಡಿಯೋದಲ್ಲಿ ಅವರ ಕುರಿತಾದ ಎಲ್ಲಾ ಆಸಕ್ತಿದಾಯಕ ಮಾಹಿತಿಗಳನ್ನ ತಿಳಿಸಿಕೊಡ್ತೇನೆ.
ಕಿರಣ್ ರಾಜ್ ಮೂಲತಃ ಕೊಡಗಿನವರಾದ್ರು ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಇವ್ರ ತಂದೆ ಸೇನೆಯಲ್ಲಿ ಕೆಲಸ ಮಾಡ್ತಿದ್ದರಿಂದ ಒಂದೂರಿನಿಂದ ಇನ್ನೊಂದುರಿಗೆ ಪಯಣ ಸಾಮಾನ್ಯವಾಗಿತ್ತು. 1993 ಜುಲೈ 05ರಂದು ಜನಿಸಿದ ಕಿರಣ್ ರಾಜ್, ಆಳ್ವಾಸ್ ಕಾಲೇಜಿನಲ್ಲಿ ಬಿಸಿಎ ಮುಗಿಸಿದ್ದಾರಾದ್ರು, ಬಣ್ಣದ ಜಗತ್ತಿನ ಮೋಹಕ್ಕೆ ಬಿದ್ದು ಚಿತ್ರರಂಗದತ್ತ ವಾಲಿದ್ರು. ಆರಂಭದಲ್ಲಿ ನಟ ಅನೇಕ ಚಿತ್ರಗಳಲ್ಲಿ ಕಿರಿಯ ಕಲಾವಿದನಾಗಿ ಕಾಣಿಸಿಕೊಂಡರು, ಬ್ಯಾಕ್ಗ್ರೌಂಡ್ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ರು. ನಂತರ ಕೆಲವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡ್ರು.
ಕಿರಣ್ ರಾಜ್ ಅದೃಷ್ಟ ಬದಲಾಗಿದ್ದು ಹಿಂದಿ ಸೀರಿಯಲ್’ನಿಂದ.. ಅಲ್ಲಿ ಲವ್ ಬೈ ಚಾನ್ಸ್, ಹೀರೋಸ್ ಹೀಗೇ ಹಲವು ಸೀರಿಯಲ್’ಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ರು. ದೇವತೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೂ ಎಂಟ್ರಿ ಕೊಟ್ರು. ಕನ್ನಡತಿ ಸೀರಿಯಲ್ ಇವ್ರಿಗೆ ಅಪಾರ ಜನಮನ್ನಣೆ ತಂದು ಕೊಡ್ತು. ಆಮೇಲೆ ಹರ್ಷ ಅಂತಾನೇ ಚಿರಪರಿಚಿತರಾದ್ರು. ಬೆಳ್ಳಿ ತೆರೆಯಲ್ಲಿ ನಟನಾಗಿ ಮಿಂಚಿದ್ದು, 2017ರಲ್ಲಿ ತೆರೆಕಂಡ ಮಾರ್ಚ್ 22 ಸಿನಿಮಾ ಮೂಲಕ. ಆಮೇಲೆ ಇವ್ರು ಅಸತೋಮ ಸದ್ಗಮಯ, ಜೀವ್ನಾನೇ ನಾಟ್ಕ ಸ್ವಾಮಿ, ಭರ್ಜರಿ ಗಂಡು, ರಾನಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು, ಆದ್ರೆ, ಆ ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಸಧ್ಯ ಕರ್ಣ ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ವಾಲಿರುವ ಕಿರಣ್, ಕರ್ಣನಾಗಿ ಅಮ್ಮಂದಿರಿಗೆ ಮುದ್ದಿನ ಮಗ, ಹುಡುಗಿಯರ ಡ್ರೀಮ್ ಬಾಯ್, ಹುಡುಗರಿಗೆ ಇನ್ಸ್ಪೇರೇಷನ್ ಆಗಿದ್ದಾರೆ.
ಕಿರಣ್ ರಾಜ್ ಅವರ ಕುರಿತ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ, ಅದು ಅವ್ರ ಸಮಾಜ ಸೇವೆ. ‘ಕಿರಣ್ ರಾಜ್ ಫೌಂಡೇಶನ್’ ಮೂಲಕ ನೂರಾರು ಬಡ ಕುಟುಂಬಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಕಿರಣ್ ರಾಜ್, ಆಗರ್ಭ ಶ್ರೀಮಂತ ಅನ್ನೋದು ನಿಜ. ಆದ್ರೆ, ದುಡ್ಡಿನಿಂದಲ್ಲ ಮನಸ್ಸಿನಿಂದ. ಕೋಟ್ಯಾಧಿಪತಿ ಅಂತಾ ಹೇಳಿಸಿಕೊಳ್ಳೋಕೆ ಬರೀ ದೊಡ್ಡಿದ್ರೆ ಸಾಕು, ಆದ್ರೆ ಕಿರಣ್ ರಾಜ್ ತರ ದುಡಿದ ದುಡ್ಡಲ್ಲಿ ಒಂದಷ್ಟು ದಾನ ಮಾಡಿದ್ರೆ ಕೋಟಿಗೊಬ್ಬ ಅಂತಾ ಕರೆಸಿಕೊಳ್ಬೋದು ಅಲ್ವಾ.
ಕಿರಣ್ ರಾಜ್ ಅವರ ನಟನೆ, ಒಳ್ಳೆತನ ನಿಮಗೂ ಇಷ್ಟವಾಗುತ್ತಿದ್ದರೆ ಈ ವೀಡಿಯೊಗೆ ಒಂದು ಲೈಕ್ ಕೊಡಿ. ಕಿರಣ್ ರಾಜ್ ಅವರ ಮುಂದಿನ ಸಿನಿಮಾಗಳಿಗಾಗಿ ನೀವು ಕಾಯುತ್ತಿದ್ದೀರಾ? ಕಾಮೆಂಟ್ ಮಾಡಿ ತಿಳಿಸಿ. ಇಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡೋದನ್ನ ಮರೆಯಬೇಡಿ. ಧನ್ಯವಾದಗಳು!
ವೀಕ್ಷಕರಲ್ಲಿ ವಿನಂತಿ ಮತ್ತು ಪ್ರಮುಖ ಸೂಚನೆ : ಈ ವಿಡಿಯೋದಲ್ಲಿ ತಿಳಿಸಲಾಗಿರುವ ಸಂಪೂರ್ಣ ಮಾಹಿತಿಯು ಸಾರ್ವಜನಿಕರ ಉಲ್ಲೇಖಕ್ಕಾಗಿ ಮತ್ತು ಜಾಗೃತಿಗಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬ ವೀಕ್ಷಕರು ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸುವ ಮೂಲಕ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನಮ್ಮ ವೆಬ್ಸೈಟ್ನಲ್ಲಿ ಇಂತಹದ್ದೇ ಪ್ರಮುಖ ಮಾಹಿತಿ, ಲೈವ್ ಅಪ್ಡೇಟ್ಗಳು ಮತ್ತು ಅತ್ಯಂತ ಉಪಯುಕ್ತ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿರುತ್ತದೆ. ಹೆಚ್ಚಿನ ಅಧಿಕೃತ ವಿವರಗಳಿಗಾಗಿ ಮತ್ತು ಮುಂಬರುವ ಹೊಸ ವಿಡಿಯೋಗಳ ತಾಜಾ ನೋಟಿಫಿಕೇಶನ್ಗಾಗಿ ನಮ್ಮ ಸುದ್ದಿ ಪೋರ್ಟಲ್ ಅನ್ನು ದಿನಾಲೂ ಭೇಟಿ ಮಾಡಲು ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ವೀಕ್ಷಕರಲ್ಲಿ ವಿನಂತಿ ಮತ್ತು ಪ್ರಮುಖ ಸೂಚನೆ:ಈ ವಿಡಿಯೋದಲ್ಲಿ ತಿಳಿಸಲಾಗಿರುವ ಸಂಪೂರ್ಣ ಮಾಹಿತಿಯು ಅಂತರ್ಜಾಲದಿಂದ ಸಂಗ್ರಹಿಸಲಾಗಿದ್ದು, ಜನರಿಗೆ ನಟನ ಬಗ್ಗೆ ಮಾಹಿತಿ ನೀಡಲು ಮಾತ್ರ ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬ ವೀಕ್ಷಕರು ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸುವ ಮೂಲಕ ಸಿನಿ ತಾರೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಬಹುದು. ನಮ್ಮ ವೆಬ್ಸೈಟ್ನಲ್ಲಿ ಇಂತಹದ್ದೇ ಪ್ರಮುಖ ಮಾಹಿತಿ, ಲೈವ್ ಅಪ್ಡೇಟ್ಗಳು ಮತ್ತು ಅತ್ಯಂತ ಉಪಯುಕ್ತ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿರುತ್ತದೆ. ಹೆಚ್ಚಿನ ಅಧಿಕೃತ ವಿವರಗಳಿಗಾಗಿ ಮತ್ತು ಮುಂಬರುವ ಹೊಸ ವಿಡಿಯೋಗಳ ತಾಜಾ ನೋಟಿಫಿಕೇಶನ್’ಗಾಗಿ ನಮ್ಮ ಸುದ್ದಿ ಪೋರ್ಟಲ್ ದಿನಾಲೂ ಭೇಟಿ ಮಾಡಲು ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
