Good News : ಮಹಿಳೆಯರೇ, ಯಾವುದೇ ಗ್ಯಾರೆಂಟಿ ಇಲ್ಲದೇ ಸರ್ಕಾರ ‘3 ಲಕ್ಷ’ ಸಾಲ ನೀಡ್ತಿದೆ, ನೀವೂ ಅರ್ಜಿ ಸಲ್ಲಿಸಿ
ಬೆಂಗಳೂರು : ರಾಜ್ಯ ಸರ್ಕಾರ ಮಹಿಳೆಯರನ್ನು ಸಧೃಡಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಮಹತ್ವದ ಯೋಜನೆಗಳಲ್ಲಿ ‘ಉದ್ಯೋಗಿನಿ’ ಒಂದು. ಈ ಯೋಜನೆಯಡಿ, ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಈ ಮೂಲಕ ಅವರು ಸಣ್ಣ ಉದ್ದಿಮೆಗಳನ್ನ ಸ್ಥಾಪಿಸಿ, ಆರ್ಥಿಕವಾಗಿ ಸದೃಢರಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ
ಉದ್ಯೋಗಿನಿ ಎನ್ನುವುದು ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಸಹಾಯ ಒದಗಿಸುವ ಯೋಜನೆಯಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಂತೆ, ಇದುವರೆಗೆ 48 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದು ಸಣ್ಣ ಉದ್ಯಮಿಗಳಾಗಿ ವಿಜೃಂಭಿಸುತ್ತಿದ್ದಾರೆ.
ಸಾಲದ ಮಿತಿ ಎಷ್ಟು.?
ಈ ಯೋಜನೆಯಡಿ ಪಡೆಯುವ ಸಾಲದ ಮಿತಿ 3 ಲಕ್ಷವಾಗಿದ್ರು, ಅಂಗವಿಕಲ ಮಹಿಳೆಯರು ಮತ್ತು ವಿಧವೆಯರಿಗೆ ಸಾಲದ ಮಿತಿ ಇಲ್ಲ. ಅವರು ಸ್ಥಾಪಿಸುವ ವ್ಯಾಪಾರ, ಅವರು ತಮ್ಮ ವಿದ್ಯಾರ್ಹತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನ ಸಾಲವನ್ನ ನೀಡುತ್ತಾರೆ.ಬಡ್ಡಿ ಎಷ್ಟು.?* ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಸಂಪೂರ್ಣ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ.
* ಇತರೆ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಶೇ.10ರಿಂದ ಶೇ.12ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇನ್ನು ಈ ಬಡ್ಡಿ ದರವು ಮಹಿಳೆಯರು ಸಾಲವನ್ನು ಪಡೆಯುವ ಬ್ಯಾಂಕಿನ ನಿಯಮಗಳ ಮೇಲೆ ಅವಲಂಬಿತವಾಗಿದೆ.
ಸಾಲದ ಮೇಲಿನ ರಿಯಾಯಿತಿ ಎಷ್ಟು.?
ಕುಟುಂಬದ ವಾರ್ಷಿಕ ಆದಾಯವನ್ನ ಆಧರಿಸಿ, 30 ಪ್ರತಿಶತದವರೆಗೆ ಸಹಾಯಧನವನ್ನ ನೀಡಲಾಗುತ್ತದೆ.ಯಾರು ಅರ್ಹರು?* 18 ರಿಂದ 55 ವರ್ಷದೊಳಗಿನ ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಹರು.
* ಈ ಹಿಂದೆ ಯಾವುದೇ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡದೇ ಇದ್ದರೆ ಸಾಲ ನೀಡುವುದಿಲ್ಲ.
ಯಾವ ದಾಖಲೆಗಳನ್ನ ಸಲ್ಲಿಸಬೇಕು?
* ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನ ಲಗತ್ತಿಸಬೇಕು
* ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರ
* ಬಡತನ ರೇಖೆಗಿಂತ ಕೆಳಗಿರುವವರು ಪಡಿತರ ಚೀಟಿಯ ಪ್ರತಿಯನ್ನ ಲಗತ್ತಿಸಬೇಕು.
* ಆದಾಯ ಪರಿಶೀಲನೆ ಪತ್ರ
* ನಿವಾಸದ ಪುರಾವೆ
* ಜಾತಿ ದೃಢೀಕರಣ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಬುಕ್
ಸಾಲ ಪಡೆಯಲು ಯಾರನ್ನು ಸಂಪರ್ಕಿಸಬೇಕು.?
ಈ ಯೋಜನೆಯಡಿ ಸಾಲ ಪಡೆಯಲು ಮಹಿಳೆಯರು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ kswdc.karnataka.gov.in ಗೆ ಭೇಟಿ ನೀಡಬಹುದು
ಉದ್ಯೋಗಿನಿ ಯೋಜನೆಯಡಿ ಸಿಗುವ ಸಬ್ಸಿಡಿ ಮತ್ತು ಸಾಲದ ವಿವರ!
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಗೆ ತರಲಾಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ₹3 ಲಕ್ಷದವರೆಗೆ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು. ವಿಶೇಷವೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಾಲದ ಮೊತ್ತದಲ್ಲಿ ಶೇ. 50 ರಷ್ಟು ಸಹಾಯಧನ (Subsidy) ದೊರೆಯಲಿದ್ದು, ಸಾಮಾನ್ಯ ಹಾಗೂ ಇತರೆ ವರ್ಗದ ಮಹಿಳೆಯರಿಗೆ ಶೇ. 30 ರಷ್ಟು ಸಬ್ಸಿಡಿ ಸೌಲಭ್ಯ ಸಿಗಲಿದೆ. ಯಾವುದೇ ಆಸ್ತಿ ಅಡಮಾನ ಅಥವಾ ಜಾಮೀನು ಇಲ್ಲದೆಯೇ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬಯಸುವ 18 ರಿಂದ 55 ವರ್ಷದೊಳಗಿನ ಅರ್ಹ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.ಹೆಚ್ಚಿನ ಅಧಿಕೃತ ಸರ್ಕಾರಿ ಯೋಜನೆಗಳ ನಿಖರ ಮಾಹಿತಿ, ಉದ್ಯೋಗ ಸುದ್ದಿಗಳು ಮತ್ತು ತಾಜಾ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಸುದ್ದಿತಾಣವನ್ನು ದಿನಾಲೂ ಭೇಟಿ ಮಾಡಿ.
