JobsNationalState

Good News ; ಪೋಸ್ಟ್ ಆಫೀಸ್’ನಲ್ಲಿ 23,757 ಹುದ್ದೆಗಳಿಗೆ ನೇರ ನೇಮಕಾತಿ, ಯಾವುದೇ ಪರೀಕ್ಷೆ ಇಲ್ಲ, ಸಂದರ್ಶನವಿಲ್ಲ!

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಯಾವುದೇ ಪರೀಕ್ಷೆ ಮತ್ತು ಸಂದರ್ಶನ ನಡೆಸದೇ ನೇರ ನೇಮಕಾತಿ ಮಾಡಲಾಗುತ್ತದೆ.

ಅದ್ರಂತೆ, ಭಾರತೀಯ ಅಂಚೆ ಇಲಾಖೆ 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ (GDS) Schedule-II ಅಡಿಯಲ್ಲಿ ಒಟ್ಟು 23,757 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಹುದ್ದೆಯ ವಿವರಗಳು.!

  • ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM)
  • ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM)
  • ಡಾಕ್ ಸೇವಕ್

ವಿದ್ಯಾರ್ಹತೆ : ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣಿವಾಗಿರಬೇಕು.

ಕಡ್ಡಾಯ ಸ್ಥಳೀಯ ಭಾಷೆ : ಆಯ್ಕೆಮಾಡಿದ ಅಂಚೆ ವೃತ್ತದ ಸ್ಥಳೀಯ ಭಾಷೆ ಅಂದರೆ ಕನ್ನಡ ಭಾಷೆಯನ್ನ ಕನಿಷ್ಠ 10ನೇ ತರಗತಿಯವರೆಗೆ ಅಧ್ಯಯನ ಮಾಡಿರಬೇಕು.

ಹೆಚ್ಚುವರಿ ಅವಶ್ಯಕತೆಗಳು : ಮೂಲಭೂತ ಕಂಪ್ಯೂಟರ್ ಜ್ಞಾನ, ಸೈಕ್ಲಿಂಗ್ ಕೌಶಲ್ಯ ಮತ್ತು ಎಲೆಕ್ಟ್ರಾನಿಕ್ ದಾಖಲೆ ಪರಿಶೀಲನೆಗಾಗಿ ಸಕ್ರಿಯ ಡಿಜಿಲಾಕರ್ ಖಾತೆ.

ವಯಸ್ಸಿನ ಮಿತಿ.!
ಕನಿಷ್ಠ ವಯಸ್ಸು : 18 ವರ್ಷಗಳು
ಗರಿಷ್ಠ ವಯಸ್ಸು : 40 ವರ್ಷಗಳು (ಜನರಲ್ / ಇಡಬ್ಲ್ಯೂಎಸ್)

ವಯಸ್ಸಿನ ಸಡಿಲಿಕೆಗಳು.!
ಒಬಿಸಿ (ಕೆನೆರಹಿತ) : 3 ವರ್ಷಗಳು (43 ವರ್ಷಗಳವರೆಗೆ)
ಎಸ್‌ಸಿ / ಎಸ್‌ಟಿ : 5 ವರ್ಷಗಳು (45 ವರ್ಷಗಳವರೆಗೆ)
ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು (PwBD): 10 ವರ್ಷಗಳು
PwBD + ಒಬಿಸಿ : 13 ವರ್ಷಗಳು
PwBD + ಎಸ್‌ಸಿ / ಎಸ್‌ಟಿ : 15 ವರ್ಷಗಳು

ಪ್ರಮುಖ ದಿನಾಂಕಗಳು.!
ಒಟಿಆರ್ (OTR) ನೋಂದಣಿ : ಆಗಸ್ಟ್ 31, 2026 ರಿಂದ ಸೆಪ್ಟೆಂಬರ್ 19, 2026
ಆನ್‌ಲೈನ್ ಅರ್ಜಿ ಸಲ್ಲಿಕೆ : ಸೆಪ್ಟೆಂಬರ್ 2, 2026 ರಿಂದ ಸೆಪ್ಟೆಂಬರ್ 21, 2026
ಅರ್ಜಿ ತಿದ್ದುಪಡಿ ಅವಧಿ : ಸೆಪ್ಟೆಂಬರ್ 23, 2026ರಿಂದ ಸೆಪ್ಟೆಂಬರ್ 24, 2026.

ಅರ್ಜಿ ಸಲ್ಲಿಸುವ ವಿಧಾನ.!
ಅಸಕ್ತರು ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ https://www.indiapost.gov.in/gdsonlineengagement ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮೊದಲಿಗೆ ಮುಖಪುಟದಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್ (OTR) ಪೂರ್ಣಗೊಳಿಸಿ. ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಬಳಸಿ ಲಾಗಿನ್ ಆಗಿ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನ ಅಪ್‌ಲೋಡ್ ಮಾಡಿ, ಆನ್‌ಲೈನ್ ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಬಹುದು. ಅಂದ್ಹಾಗೆ, ಅಂಗವಿಕಲರು ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

Leave a Reply

Your email address will not be published. Required fields are marked *