FarmerNationalSchemes

ರೈತರಿಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್ : ಅ.30ಕ್ಕೆ ಖಾತೆಗೆ ಪಿಎಂ ಕಿಸಾನ್ 24ನೇ ಕಂತಿನ ₹2,000 ಹಣ ಜಮಾ! ಲಿಸ್ಟ್’ನಲ್ಲಿ ನಿಮ್ಮ ಹೆಸ್ರಿದ್ಯಾ? ಹೀಗೆ ಚೆಕ್ ಮಾಡಿ

Spread the love

ಬೆಂಗಳೂರು: ದೇಶದ ಹಾಗೂ ರಾಜ್ಯದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬದ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan Samman Nidhi) ಯೋಜನೆಯ ಅಡಿಯಲ್ಲಿ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರು ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದ 24ನೇ ಕಂತಿನ ಒಟ್ಟು ₹2,000 ರೂಪಾಯಿಗಳ ಹಣ ಬಿಡುಗಡೆಯ ಅಧಿಕೃತ ದಿನಾಂಕವನ್ನು ಕೇಂದ್ರ ಕೃಷಿ ಸಚಿವಾಲಯವು ಪ್ರಕಟಿಸಿದೆ.

ಅದರಂತೆ ಅಕ್ಟೋಬರ್ 30ರಂದು ವಾರಣಾಸಿಯಲ್ಲಿ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ದೇಶದ ರೈತರಿಗೆ ದೀಪಾವಳಿ ಗಿಫ್ಟ್ ನೀಡಲಿದ್ದಾರೆ.

ಹಬ್ಬದ ಈ ವಿಶೇಷ ಸಂದರ್ಭದಲ್ಲಿ ನೇರ ನಗದು ವರ್ಗಾವಣೆ (DBT) ಮೂಲಕ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ.

ಯಾವ ದಿನಾಂಕದಂದು ಹಣ ಜಮೆಯಾಗಲಿದೆ? : ಕೇಂದ್ರ ಸರ್ಕಾರದ ತಾಜಾ ವರದಿಯ ಪ್ರಕಾರ, ಮುಂಬರುವ ದೀಪಾವಳಿ ಹಬ್ಬದ ಮುನ್ನವೇ ಅಂದ್ರೆ ಅಕ್ಟೋಬರ್ 30ರಂದು ದೇಶಾದ್ಯಂತ ಇರುವ ಸುಮಾರು 11 ಕೋಟಿಗೂ ಅಧಿಕ ಅರ್ಹ ರೈತ ಕುಟುಂಬಗಳ ಖಾತೆಗೆ ಏಕಕಾಲದಲ್ಲಿ 24ನೇ ಕಂತಿನ ಹಣವನ್ನು ವರ್ಗಾಯಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನು ಕೇವಲ ಕೆಲವೇ ದಿನಗಳಲ್ಲಿ ರೈತರ ಖಾತೆಗೆ ₹2,000 ಹಣ ಅಧಿಕೃತವಾಗಿ ತಲುಪಲಿದೆ.

ಈ ಬಾರಿ ಯಾರಿಗೆಲ್ಲಾ ₹2,000 ಹಣ ಸಿಗುವುದಿಲ್ಲ?

ಆಹಾರ ಮತ್ತು ಕೃಷಿ ಇಲಾಖೆಯು ಈ ಬಾರಿ ಜಮಾ ಪ್ರಕ್ರಿಯೆಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಕೆಳಗಿನ ಕೆಲಸಗಳನ್ನು ಮಾಡದ ರೈತರ ಹಣ ಸ್ಥಗಿತಗೊಳ್ಳಲಿದೆ.

• ಇ-ಕೆವೈಸಿ (e-KYC): ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರಿಗೆ ಈ ಕಂತಿನ ಹಣ ಸಿಗುವುದಿಲ್ಲ.

• ಭೂ ದಾಖಲೆಗಳ ಜೋಡಣೆ (Land Seeding): ತಮ್ಮ ಕೃಷಿ ಭೂಮಿಯ ಪಹಣಿಯನ್ನು (RTC) ಯೋಜನೆಯೊಂದಿಗೆ ಲಿಂಕ್ ಮಾಡದೇ ಇರುವವರ ಹಣ ಕಟ್ ಆಗಲಿದೆ.

• ಆಧಾರ್ ಸೀಡಿಂಗ್: ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಡಿಬಿಟಿ (DBT) ಸಕ್ರಿಯವಾಗಿರುವುದು ಕಡ್ಡಾಯವಾಗಿದೆ.

ನಿಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ ಎಂದು ಮೊಬೈಲ್‌’ನಲ್ಲೇ ಚೆಕ್ ಮಾಡಿ!

ರೈತರು ಕಚೇರಿಗಳಿಗೆ ಅಲೆಯದೆ ತಮ್ಮ 24ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಈ ಕೆಳಗಿನಂತೆ ಸುಲಭವಾಗಿ ಪರಿಶೀಲಿಸಬಹುದು.

1. ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ.

2. ಮುಖಪುಟದಲ್ಲಿ ಕಾಣಿಸುವ ‘Beneficiary List’ (ಫಲಾನುಭವಿಗಳ ಪಟ್ಟಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3. ನಂತರ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ನಿಮ್ಮ ಗ್ರಾಮದ ಹೆಸರನ್ನು ಸರಿಯಾಗಿ ಆರಿಸಿಕೊಳ್ಳಿ.

4. ಕೊನೆಯದಾಗಿ ‘Get Report’ ಬಟನ್ ಕ್ಲಿಕ್ ಮಾಡಿದರೆ, ನಿಮ್ಮ ಇಡೀ ಗ್ರಾಮದ ಅರ್ಹ ರೈತರ ಅಧಿಕೃತ ಪಟ್ಟಿ ಲೈವ್ ಆಗಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ₹2,000 ಹಣ ಪಕ್ಕಾ ಜಮೆಯಾಗುತ್ತದೆ.

ಅಂದ್ಹಾಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ವರ್ಷಕ್ಕೆ ₹6,000/- ಮೊತ್ತವನ್ನು ತಲಾ ₹2,000/- ರಂತೆ ಮೂರು ಸಮಾನ ಕಂತುಗಳಲ್ಲಿ (ಪ್ರತಿ 4 ತಿಂಗಳಿಗೊಮ್ಮೆ) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಯೋಜನೆಯ ಸೌಲಭ್ಯ ಪಡೆಯಲು eKYC ಮಾಡಿಸುವುದು ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಕಂತಿನ ಹಣ ಬರುವುದಿಲ್ಲ.

Leave a Reply

Your email address will not be published. Required fields are marked *