NationalSchemes

ಮಹಿಳೆಯರಿಗೆ ದೀಪಾವಳಿ ಗಿಫ್ಟ್ : ಉಚಿತ ‘ಗ್ಯಾಸ್ ಸಿಲಿಂಡರ್, ಸ್ಟೌವ್’ ಪಡೆಯಲು ಹೊಸ ಅರ್ಜಿ ಆಹ್ವಾನ! ಇಂದೇ ಅಪ್ಲೈ ಮಾಡಿ

Spread the love

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ದೇಶದ ಹಾಗೂ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬಗಳ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಭರ್ಜರಿ “ಪಿಎಂ ಉಜ್ವಲ ಯೋಜನೆ 3.0” (PM Ujjwala Yojana 2026) ಅಡಿಯಲ್ಲಿ ಹೊಸ ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕಗಳನ್ನು ಒದಗಿಸಲು ಇಂದಿನಿಂದ ಅಧಿಕೃತವಾಗಿ ಆನ್‌ಲೈನ್ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ.

ದೀಪಾವಳಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ಮಹಿಳೆಯರಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದ್ದು, ಸಂಪೂರ್ಣವಾಗಿ ಉಚಿತ ಸೌಲಭ್ಯ ಸಿಗಲಿದೆ.

ಯೋಜನೆಯಡಿ ಸಿಗುವ ಉಚಿತ ಸೌಲಭ್ಯಗಳು!

• ಮೊದಲ ಸಿಲಿಂಡರ್ ಉಚಿತ: ಯೋಜನೆಯಡಿ ನೋಂದಾಯಿಸಿಕೊಳ್ಳುವ ಮಹಿಳೆಯರಿಗೆ ಮೊದಲ ಬಾರಿಗೆ 14.2 ಕೆಜಿಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.

• ಉಚಿತ ಗ್ಯಾಸ್ ಒಲೆ: ಇದರೊಂದಿಗೆ ಅತ್ಯಾಧುನಿಕ ಸುರಕ್ಷಿತವಾದ ಗ್ಯಾಸ್ ಒಲೆ (Gas Stove) ಮತ್ತು ರೆಗ್ಯುಲೇಟರ್ ಪೈಪ್‌ಲೈನ್ ಕಿಟ್ ಅನ್ನು ಸಹ ಉಚಿತವಾಗಿ ವಿತರಿಸಲಾಗುತ್ತದೆ.

ಯಾರು ಅರ್ಹರು ಮತ್ತು ಬೇಕಾಗುವ ದಾಖಲೆಗಳು!

• ಅರ್ಹತೆ: ಅರ್ಜಿ ಸಲ್ಲಿಸುವ ಫಲಾನುಭವಿಯು ಕಡ್ಡಾಯವಾಗಿ ಮಹಿಳೆಯಾಗಿದ್ದು, 18 ವರ್ಷ ತುಂಬಿರಬೇಕು. ಕುಟುಂಬದಲ್ಲಿ ಈಗಾಗಲೇ ಯಾವುದೇ ಇತರ ಗ್ಯಾಸ್ ಸಂಪರ್ಕ ಇರಬಾರದು. ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಒಂದೇ ಮನೆಯಲ್ಲಿ ಯಾವುದೇ ತೈಲ ಮಾರುಕಟ್ಟೆ ಕಂಪನಿಗಳಿಂದ (OMC) ಅಂದರೆ ಇಂಡೇನ್, ಭಾರತ್ ಗ್ಯಾಸ್, HP ಗ್ಯಾಸ್’ನಿಂದ ಯಾವುದೇ LPG ಸಂಪರ್ಕ ಇರಬಾರದು. ಇನ್ನು ಯಾವುದೇ ವರ್ಗಕ್ಕೆ ಸೇರಿದ ಮಹಿಳಾ ಫಲಾನುಭವಿಗಳು ಉಜ್ವಲ ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ಗ್ರಾಮೀಣ) ಫಲಾನುಭವಿ ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ಅತ್ಯಂತ ಹಿಂದುಳಿದ ವರ್ಗಗಳು, ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿ, ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬಡ ಕುಟುಂಬಗಳು, ಅರಣ್ಯವಾಸಿಗಳು, ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು ಯೋಜನೆಯ ಲಾಭ ಪಡೆಯಲು ಅರ್ಹರು.

• ದಾಖಲೆಗಳು: ಅರ್ಜಿದಾರರ ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಬ್ಯಾಂಕ್ ಪಾಸ್‌ಬುಕ್ ವಿವರಗಳು ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಮೊಬೈಲ್ ನಂಬರ್,  KYC ಫಾರ್ಮ್.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅಧಿಕೃತ ಲಿಂಕ್.!

ಆಸಕ್ತ ಮಹಿಳೆಯರು ಉಜ್ವಲ ಯೋಜನೆಯ ಅಧಿಕೃತ ರಾಷ್ಟ್ರೀಯ ಪೋರ್ಟಲ್ pmuy.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯನ್ನು (Indane, HP, Bharat Gas) ಆರಿಸಿಕೊಂಡು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ.!

  • ಗ್ಯಾಸ್ ಕಂಪನಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.
  • ನಂತ್ರ LPG ವಿತರಕ ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು HPಯಲ್ಲಿ ಒಂದು ಕಂಪನಿಯನ್ನ ಆರಿಸಿ.
  • ಪ್ರಧಾನಮಂತ್ರಿ ಉಜ್ವಲ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಲು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
  • ಗ್ಯಾಸ್ ಕಂಪನಿಯವರು ಅರ್ಜಿ ನಮೂನೆ ಮತ್ತು ಅರ್ಜಿದಾರರ ಮನೆ ಪರಿಶೀಲಿಸುತ್ತಾರೆ.
  • ಪರಿಶೀಲನೆಯ ನಂತರ, ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕವನ್ನ ಒದಗಿಸಲಾಗುತ್ತದೆ.

Leave a Reply

Your email address will not be published. Required fields are marked *