StateJobs

Good News : 5,431 ‘SDA,FDA’ ಹುದ್ದೆಗಳಿಗೆ ನೇಮಕಾತಿ ; ಅರ್ಜಿ ಸಲ್ಲಿಕೆ, ಪರೀಕ್ಷಾ, ಸಿಲಬಸ್, ಶುಲ್ಕ ಸೇರಿ ಸಂಪೂರ್ಣ ವಿವರ ಇಲ್ಲಿದೆ!

Spread the love

ಬೆಂಗಳೂರು : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ಬರೋಬ್ಬರಿ 33 ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 5431 ಪ್ರಥಮ ದರ್ಜೆ ಸಹಾಯಕರ (FDA) ಮತ್ತು ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅದ್ರಂತೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ಶುಲ್ಕ ಸೇರಿ ಪರೀಕ್ಷಾ ದಿನಾಂಕ ಹಾಗೂ ಸಂಪೂರ್ಣ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಇಲಾಖಾವಾರು ಹುದ್ದೆಗಳು, ಪರೀಕ್ಷಾ ಸ್ವರೂಪ, ವಯೋಮಿತಿ ಮತ್ತು ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ.

ಖಾಲಿ ಇರುವ ಹುದ್ದೆಗಳ ವಿವರ!

• ಉಳಿಕೆ ಮೂಲ ವೃಂದ (RPC): ಎಫ್‌ಡಿಎ – 2,163 | ಎಸ್‌ಡಿಎ – 2,070 ಹುದ್ದೆಗಳು.

• ಕಲ್ಯಾಣ ಕರ್ನಾಟಕ ವೃಂದ (KK): ಎಫ್‌ಡಿಎ – 563 | ಎಸ್‌ಡಿಎ – 635 ಹುದ್ದೆಗಳು.

• ಒಟ್ಟು ಒಟ್ಟಾರೆ ಹುದ್ದೆಗಳು: 5,431 (33 ಇಲಾಖೆಗಳಲ್ಲಿ).

ಪರೀಕ್ಷೆಗಳು ಯಾವಾಗ ನಡೆಯಲಿವೆ?

ಅಧಿಕೃತ ಪ್ರಕಟಣೆಯ ಪ್ರಕಾರ, ಈ ಬೃಹತ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಮುಂಬರುವ 2027ರ ಜನವರಿ 8, 9, 10, 16 ಮತ್ತು 17 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನಡೆಯಲಿವೆ.

ಪರೀಕ್ಷಾ ಸ್ವರೂಪ (Exam Pattern)!

ಈ ನೇಮಕಾತಿ ಪರೀಕ್ಷೆಯು ಹಳೆಯ ಓಎಂಆರ್ (OMR) ಮಾದರಿಯ ಆಫ್‌ಲೈನ್ ಲಿಖಿತ ಪರೀಕ್ಷೆಯಾಗಿರಲಿದ್ದು, ಒಟ್ಟು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

• ಪತ್ರಿಕೆ – 1 (100 ಅಂಕಗಳು): ಸಂಪೂರ್ಣವಾಗಿ ಸಾಮಾನ್ಯ ಜ್ಞಾನ (General Knowledge) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

• ಪತ್ರಿಕೆ – 2 (100 ಅಂಕಗಳು): ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ (Computer Literacy) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಶೈಕ್ಷಣಿಕ ಅರ್ಹತೆಗಳು!

• ಎಸ್‌ಡಿಎ (SDA) ಹುದ್ದೆಗಳಿಗೆ : ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ (12th Pass) ಅಥವಾ ತತ್ಸಮಾನ ವಿದ್ಯಾರ್ಹತೆ ಕಡ್ಡಾಯ. (ಆದರೆ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳಿಗೆ ವಾಣಿಜ್ಯ ವಿಭಾಗದಲ್ಲಿ ಓದಿರಬೇಕು).

• ಎಫ್‌ಡಿಎ (FDA) ಹುದ್ದೆಗಳಿಗೆ: ಯಾವುದೇ ವಿಷಯದಲ್ಲಿ ಪದವಿ (Graduate Degree) ಉತ್ತೀರ್ಣರಾಗಿರಬೇಕು.

• ವಿಶೇಷ ಹುದ್ದೆಗಳು: ಲೆಕ್ಕ ಸಹಾಯಕರ ಹುದ್ದೆಗೆ ಬಿ.ಕಾಂ/ಬಿಬಿಎ/ಬಿಬಿಎಂ, ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಅರ್ಥಶಾಸ್ತ್ರ ಅಥವಾ ಗಣಿತ ಪದವಿ, ವಾರ್ಡನ್ ಹುದ್ದೆಗೆ ಬಿ.ಇಡಿ ಮತ್ತು ಪ್ರವಾಸೋದ್ಯಮ ಪ್ರಚಾರ ಅಧಿಕಾರಿ ಹುದ್ದೆಗೆ ಟೂರಿಸಂ/ಜರ್ನಲಿಸಂ ಅಥವಾ ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೋಮಾ ಕಡ್ಡಾಯವಾಗಿದೆ.

ಹುದ್ದೆಗಳ ವೇತನ ಶ್ರೇಣಿ (Salaray)!

• ಪ್ರವಾಸೋದ್ಯಮ ಪ್ರಚಾರ ಅಧಿಕಾರಿ: ₹61,300 ರಿಂದ ₹1,12,900

• ವಾಣಿಜ್ಯ ತೆರಿಗೆ ಪರಿವೀಕ್ಷಕರು / ಉಪ ನೋಂದಣಾಧಿಕಾರಿ: ₹54,175 ರಿಂದ ₹99,400

• ಸಹಾಯಕ ಹುದ್ದೆಗಳು: ₹49,050 ರಿಂದ ₹92,500

• ಇತರ ಸಹಾಯಕರ ಹುದ್ದೆಗಳು: ₹44,425 ರಿಂದ ₹83,700

ವಯೋಮಿತಿ ಸಡಿಲಿಕೆ!

• ಸಾಮಾನ್ಯ ಅರ್ಹತೆ (GM): ಗರಿಷ್ಠ 40 ವರ್ಷಗಳು.

• ಹಿಂದುಳಿದ ವರ್ಗಗಳು (OBC): ಗರಿಷ್ಠ 43 ವರ್ಷಗಳು.

• ಎಸ್‌ಸಿ / ಎಸ್‌ಟಿ / ಪ್ರವರ್ಗ-1: ಗರಿಷ್ಠ 45 ವರ್ಷಗಳು.

ಅರ್ಜಿ ಸಲ್ಲಿಸುವ ಪರೀಕ್ಷಾ ಶುಲ್ಕ!

• ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರು (GM & OBC): ₹750

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1: ₹500

• ಅಂಗವಿಕಲ ಅಭ್ಯರ್ಥಿಗಳಿಗೆ: ₹250

ಅರ್ಜಿ ಸಲ್ಲಿಸುವುದು ಹೇಗೆ? : ಅರ್ಹ ಅಭ್ಯರ್ಥಿಗಳು ನಿಗದಿತ ಲಿಂಕ್‌ಗಳ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 25, 2026 ರವರೆಗೆ ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ.

Leave a Reply

Your email address will not be published. Required fields are marked *