Good News ; ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ : ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಭರ್ಜರಿ ನೇಮಕಾತಿ! ಬೇಗ ಅಪ್ಲೈ ಮಾಡಿ
ಬೆಂಗಳೂರು: ಕರ್ನಾಟಕದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಅರಣ್ಯ ಇಲಾಖೆಯು (Karnataka Forest Department – KFD) ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 750 ಫಾರೆಸ್ಟ್ ವಾಚರ್ / ಅರಣ್ಯ ವೀಕ್ಷಕ (Group D) ಹುದ್ದೆಗಳ ಬೃಹತ್ ನೇಮಕಾತಿಯ ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಇದೀಗ ಅಧಿಕೃತವಾಗಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಯಾವುದೇ ಕಠಿಣ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ 10ನೇ ತರಗತಿಯ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ನಡೆಯುತ್ತಿರುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.
ಹುದ್ದೆಗಳ ಸಂಪೂರ್ಣ ವಿವರಗಳು!
ನೇಮಕಾತಿ ಸಂಸ್ಥೆ: ಕರ್ನಾಟಕ ಅರಣ್ಯ ಇಲಾಖೆ (KFD).ಹುದ್ದೆಯ ಹೆಸರು: ಫಾರೆಸ್ಟ್ ವಾಚರ್ / ಅರಣ್ಯ ವೀಕ್ಷಕ (Forest Watcher / Forest Observer).
ಒಟ್ಟು ಹುದ್ದೆಗಳು: 750 ಹುದ್ದೆಗಳು (700 ಸಾಮಾನ್ಯ ವೃಂದ + 50 ಕಲ್ಯಾಣ ಕರ್ನಾಟಕ ವೃಂದ).
ವೇತನ ಶ್ರೇಣಿ: ಪ್ರತಿ ತಿಂಗಳು ₹29,600 ರಿಂದ ₹52,800 ರವರೆಗೆ (ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ).
ವಿದ್ಯಾರ್ಹತೆ ಮತ್ತು ವಯೋಮಿತಿ!
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ ಎಸ್ಎಸ್ಎಲ್ಸಿ (SSLC / 10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 33 ರಿಂದ 35+ ವರ್ಷಗಳವರೆಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ).
ಆಯ್ಕೆ ವಿಧಾನ (Selection Process)!
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ದೈಹಿಕ ಪ್ರಮಾಣ ಪರೀಕ್ಷೆ (PST) ಮತ್ತು ದೈಹಿಕ ಸಹಿಷ್ಣುತೆ/ಸಾಮರ್ಥ್ಯ ಪರೀಕ್ಷೆಗಳ (PET) ಮೂಲಕ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಲಿಂಕ್!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 30, 2026 (Extended Date).
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಪೋರ್ಟಲ್ aranya.gov.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರಣ್ಯ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯ ವಿವರ!
ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗಾಗಿ ನಿಗದಿಪಡಿಸಲಾದ ದೈಹಿಕ ಪರೀಕ್ಷೆಯ ಮಾನದಂಡಗಳು (Physical Standards & Efficiency Test) ಈ ಕೆಳಗಿನಂತಿವೆ.
ದೈಹಿಕ ಕಾರ್ಯದಕ್ಷತೆ ಪರೀಕ್ಷೆ (Physical Efficiency Test)!
ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಪುರುಷ ಅಭ್ಯರ್ಥಿಗಳು 100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು 800 ಮೀಟರ್ ಓಟವನ್ನು 2 ನಿಮಿಷ 50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು ಎತ್ತರ ಜಿಗಿತ (High Jump) ಕನಿಷ್ಠ 1.20 ಮೀಟರ್ ಜಿಗಿಯಬೇಕು. ನಂತ್ರ ದೂರ ಜಿಗಿತ (Long Jump) ಕನಿಷ್ಠ 3.80 ಮೀಟರ್ ಜಿಗಿಯಬೇಕು. ಇದಲ್ಲದೇ ಗುಂಡು ಎಸೆತ (Shot put – 7.26 KG)ವಿದ್ದು, ಕನಿಷ್ಠ 5.60 ಮೀಟರ್ ದೂರ ಎಸೆಯಬೇಕು.
ಅದ್ರಂತೆ, ಮಹಿಳಾ ಅಭ್ಯರ್ಥಿಗಳು 100 ಮೀಟರ್ ಓಟವನ್ನು 18.5 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಬಳಿಕ 200 ಮೀಟರ್ ಓಟವನ್ನು 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು ಎತ್ತರ ಜಿಗಿತ (High Jump): ಕನಿಷ್ಠ 0.90 ಮೀಟರ್ ಜಿಗಿಯಬೇಕು. ನಂತ್ರ ದೂರ ಜಿಗಿತ (Long Jump) ಕನಿಷ್ಠ 2.50 ಮೀಟರ್ ಜಿಗಿಯಬೇಕು. ಇದಲ್ಲದೇ ಇವರಿಗೂ ಗುಂಡು ಎಸೆತ (Shot put – 4 KG)ವಿದ್ದು ಕನಿಷ್ಠ 3.75 ಮೀಟರ್ ದೂರ ಎಸೆಯಬೇಕು. ಅಂದ್ಹಾಗೆ, ಎತ್ತರ ಜಿಗಿತ, ದೂರ ಜಿಗಿತ ಮತ್ತು ಗುಂಡು ಎಸೆತಕ್ಕೆ ತಲಾ 3 ಅವಕಾಶಗಳನ್ನು ನೀಡಲಾಗುತ್ತದೆ.
1. ಶಾರೀರಿಕ ಅರ್ಹತೆ (Physical Standards) : ಅಭ್ಯರ್ಥಿಗಳು ಕನಿಷ್ಠ ಈ ಕೆಳಗಿನ ದೈಹಿಕ ಆಕಾರವನ್ನು ಹೊಂದಿರಬೇಕು.
ಪುರುಷ ಅಭ್ಯರ್ಥಿಗಳು!
ಎತ್ತರ : ಕನಿಷ್ಠ 163 ಸೆಂ.ಮೀ (ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 150 ಸೆಂ.ಮೀ)
ಎದೆ ಸುತ್ತಳತೆ : ಕನಿಷ್ಠ 79 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಿಸುವ ಸಾಮರ್ಥ್ಯ ಹೊಂದಿರಬೇಕು)
ಮಹಿಳಾ ಅಭ್ಯರ್ಥಿಗಳು!
ಎತ್ತರ: ಕನಿಷ್ಠ 150 ಸೆಂ.ಮೀ (ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 145 ಸೆಂ.ಮೀ)
ತೂಕ: ಕನಿಷ್ಠ 45 ಕೆ.ಜಿ
2. ದೈಹಿಕ ಕಾರ್ಯದಕ್ಷತೆ ಪರೀಕ್ಷೆ (Physical Efficiency Test)
ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಪುರುಷ ಅಭ್ಯರ್ಥಿಗಳು 100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು 800 ಮೀಟರ್ ಓಟವನ್ನು 2 ನಿಮಿಷ 50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು ಎತ್ತರ ಜಿಗಿತ (High Jump) ಕನಿಷ್ಠ 1.20 ಮೀಟರ್ ಜಿಗಿಯಬೇಕು. ನಂತ್ರ ದೂರ ಜಿಗಿತ (Long Jump) ಕನಿಷ್ಠ 3.80 ಮೀಟರ್ ಜಿಗಿಯಬೇಕು. ಇದಲ್ಲದೇ ಗುಂಡು ಎಸೆತ (Shot put – 7.26 KG)ವಿದ್ದು, ಕನಿಷ್ಠ 5.60 ಮೀಟರ್ ದೂರ ಎಸೆಯಬೇಕು.
ಅದ್ರಂತೆ, ಮಹಿಳಾ ಅಭ್ಯರ್ಥಿಗಳು 100 ಮೀಟರ್ ಓಟವನ್ನು 18.5 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಬಳಿಕ 200 ಮೀಟರ್ ಓಟವನ್ನು 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇನ್ನು ಎತ್ತರ ಜಿಗಿತ (High Jump): ಕನಿಷ್ಠ 0.90 ಮೀಟರ್ ಜಿಗಿಯಬೇಕು. ನಂತ್ರ ದೂರ ಜಿಗಿತ (Long Jump) ಕನಿಷ್ಠ 2.50 ಮೀಟರ್ ಜಿಗಿಯಬೇಕು. ಇದಲ್ಲದೇ ಇವರಿಗೂ ಗುಂಡು ಎಸೆತ (Shot put – 4 KG)ವಿದ್ದು ಕನಿಷ್ಠ 3.75 ಮೀಟರ್ ದೂರ ಎಸೆಯಬೇಕು. ಅಂದ್ಹಾಗೆ, ಎತ್ತರ ಜಿಗಿತ, ದೂರ ಜಿಗಿತ ಮತ್ತು ಗುಂಡು ಎಸೆತಕ್ಕೆ ತಲಾ 3 ಅವಕಾಶಗಳನ್ನು ನೀಡಲಾಗುತ್ತದೆ.
3. ನಡಿಗೆ ಪರೀಕ್ಷೆ (Walking Test)
ದೈಹಿಕ ಕಾರ್ಯದಕ್ಷತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಂತಿಮವಾಗಿ ನಡಿಗೆ ಪರೀಕ್ಷೆ ಇರುತ್ತದೆ.
ಪುರುಷರು : 4 ಗಂಟೆಗಳಲ್ಲಿ 25 ಕಿಲೋಮೀಟರ್ ನಡೆಯಬೇಕು.
ಮಹಿಳೆಯರು : 4 ಗಂಟೆಗಳಲ್ಲಿ 16 ಕಿಲೋಮೀಟರ್ ನಡೆಯಬೇಕು.
ನಾಡಿನ ಅರಣ್ಯ ಸಂಪತ್ತು, ಜೀವವೈವಿಧ್ಯತೆ ಮತ್ತು ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಈ ಹುದ್ದೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಗ್ರಾಮೀಣ ಭಾಗದ ಯುವಕರಿಗೆ ತಾಯ್ನಾಡಿನಲ್ಲೇ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಮತ್ತು ಪ್ರಕೃತಿಯ ಮಡಲಿನಲ್ಲಿ ಸೇವೆ ಸಲ್ಲಿಸಲು ಇದೊಂದು ಅತ್ಯಾಧುನಿಕ ಹಾಗೂ ಸುವರ್ಣ ಅವಕಾಶವಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
