FarmerNationalSchemes

ರೈತರಿಗೆ ವರ್ಷಕ್ಕೆ 36,000 ಪಿಂಚಣಿ ; ಕೇಂದ್ರ ಸರ್ಕಾರದಿಂದ ಭರ್ಜರಿ ಯೋಜನೆ! ಕೂಡಲೇ ಅರ್ಜಿ ಸಲ್ಲಿಸಿ

Spread the love

ಬೆಂಗಳೂರು: ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ವೃದ್ಧಾಪ್ಯದ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ “ಪ್ರಧಾನ ಮಂತ್ರಿ ಕಿಸಾನ್ ಮಾಂಧನ್ ಯೋಜನೆ”ಯನ್ನು (PM-Kisan Maandhan Yojana) ಯಶಸ್ವಿಯಾಗಿ ಮುಂದುವರಿಸಿದೆ. ಈ ಯೋಜನೆಯಡಿ ನೋಂದಾಯಿಸಿಕೊಳ್ಳುವ ಅರ್ಹ ರೈತರಿಗೆ 60 ವರ್ಷ ತುಂಬಿದ ನಂತರ ಸರ್ಕಾರದಿಂದ ಪ್ರತಿ ತಿಂಗಳು ₹3,000 ಸ್ಥಿರ ಪಿಂಚಣಿ (Monthly Pension) ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಅಂದರೆ ವರ್ಷಕ್ಕೆ ಒಟ್ಟು ₹36,000 ಹಣ ಪಿಂಚಣಿಯಾಗಿ ದೊರೆಯುತ್ತದೆ. ರೈತರ ವೃದ್ಧಾಪ್ಯದ ದಿನಗಳಲ್ಲಿ ನಿಯಮಿತ ಆದಾಯಕ್ಕೆ ಇದು ನೆರವಾಗುವ ಉದ್ದೇಶ ಹೊಂದಿದೆ.

ವಿಶೇಷವೆಂದರೆ, ರೈತರು ತಮ್ಮ ವೃದ್ಧಾಪ್ಯದಲ್ಲಿ ಯಾರ ಮೇಲೂ ಅವಲಂಬಿತರಾಗದೆ ಗೌರವಯುತ ಜೀವನ ನಡೆಸಲು ಕೇಂದ್ರ ಸರ್ಕಾರವೇ ಈ ಪಿಂಚಣಿ ನಿಧಿಯ ಅರ್ಧದಷ್ಟು ಮೊತ್ತವನ್ನು ಭರಿಸುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?
ವಯೋಮಿತಿ: ಅರ್ಜಿ ಸಲ್ಲಿಸುವ ರೈತರ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷದೊಳಗಿರಬೇಕು.

ಜಮೀನಿನ ಮಿತಿ: 2 ಹೆಕ್ಟೇರ್ (ಸುಮಾರು 5 ಎಕರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಈ ಯೋಜನೆಗೆ ಅರ್ಹರು.

ವಿಶೇಷತೆ: ಈ ಯೋಜನೆಯಡಿ ರೈತರು ತಮ್ಮ ವಯಸ್ಸಿಗೆ ಅನುಗುಣವಾಗಿ ಪ್ರತಿ ತಿಂಗಳು ₹55 ರಿಂದ ₹200 ವರೆಗೆ ಸಣ್ಣ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ರೈತರು ಎಷ್ಟು ಹಣ ಪಾವತಿಸುತ್ತಾರೋ, ಅಷ್ಟೇ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವೇ ರೈತರ ಹೆಸರಿನಲ್ಲಿ ಪಿಂಚಣಿ ನಿಧಿಗೆ ಜಮಾ ಮಾಡುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು!
* ರೈತರ ಆಧಾರ್ ಕಾರ್ಡ್ (Aadhaar Card)
* ಜಮೀನಿನ ಪಹಣಿ / ಉತಾರ್ (RTC)
* ಬ್ಯಾಂಕ್ ಪಾಸ್‌ಬುಕ್ ವಿವರಗಳು (ಉಳಿತಾಯ ಖಾತೆ)
* ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅಧಿಕೃತ ಲಿಂಕ್!
ಆಸಕ್ತ ಮತ್ತು ಅರ್ಹ ರೈತರು ಈ ಯೋಜನೆಗೆ ಸ್ವತಃ ನೋಂದಾಯಿಸಿಕೊಳ್ಳಲು ಸರ್ಕಾರದ ಅಧಿಕೃತ ವೆಬ್‌ಸೈಟ್ ಪೋರ್ಟಲ್ maandhan.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC / Grama One) ಭೇಟಿ ನೀಡಿ ಉಚಿತವಾಗಿ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಯಾರು ಅರ್ಹರಲ್ಲ.?
PM-KMY ಇತರ ಸಾಮಾಜಿಕ ಭದ್ರತಾ ಯೋಜನೆಗಳಾದ NPS, ESIC, EPFO, PM-SYM ಮತ್ತು PM-LVM ಗಳ ಫಲಾನುಭವಿಗಳನ್ನು ಹೊರತುಪಡಿಸಿ, ಸಾಂಸ್ಥಿಕ ಭೂಮಾಲೀಕರು, ಸಾಂವಿಧಾನಿಕ ಹುದ್ದೆ ಹೊಂದಿರುವವರು, ಕೆಲವು ಚುನಾಯಿತ ಪ್ರತಿನಿಧಿಗಳು, ಸೇವೆ ಸಲ್ಲಿಸುತ್ತಿರುವ/ನಿವೃತ್ತ ಸರ್ಕಾರಿ ಮತ್ತು PSU ನೌಕರರು, ಆದಾಯ ತೆರಿಗೆ ಪಾವತಿದಾರರು ಮತ್ತು ವೈದ್ಯರು, ಎಂಜಿನಿಯರ್‌’ಗಳು, ವಕೀಲರು, CAಗಳು ಮತ್ತು ವಾಸ್ತುಶಿಲ್ಪಿಗಳಂತಹ ನೋಂದಾಯಿತ ವೃತ್ತಿಪರರನ್ನ ಹೊರಗಿಡುತ್ತದೆ.

ಅಂದ್ಹಾಗೆ, ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS), ಕ್ಲಾಸ್ IV ಮತ್ತು ಗ್ರೂಪ್ D ನೌಕರರು ಈ ಅನರ್ಹತೆಯಿಂದ ವಿನಾಯಿತಿ ಪಡೆದಿದ್ದಾರೆ.

ಆಟೋ-ಡೆಬಿಟ್ ಸೌಲಭ್ಯ : ರೈತರ ಕೊಡುಗೆಯನ್ನು ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಅರ್ಹ ರೈತರು ತಮ್ಮ PM-KISAN ಪ್ರಯೋಜನಗಳನ್ನು PM-KMY ಕೊಡುಗೆಗಳಿಗಾಗಿ ಬಳಸಿಕೊಳ್ಳಬಹುದು.

ವ್ಯಾಪ್ತಿ : ಈ ಯೋಜನೆಯು ರೈತ ಸಮುದಾಯಗಳಲ್ಲಿ ತನ್ನ ವ್ಯಾಪ್ತಿಯನ್ನ ವಿಸ್ತರಿಸಿದೆ, ಫೆಬ್ರವರಿ 2026ರ ಹೊತ್ತಿಗೆ 24,96,252 ರೈತರು ದಾಖಲಾಗಿದ್ದಾರೆ . ನೋಂದಣಿಯಲ್ಲಿ ಹರಿಯಾಣ ಮುಂಚೂಣಿಯಲ್ಲಿದ್ದು, ನಂತ್ರದ ಸ‍್ಥಾನದಲ್ಲಿ ಬಿಹಾರ ರೈತರಿದ್ದಾರೆ. ಇದು ಪ್ರಾರಂಭವಾದಾಗಿನಿಂದ, PM-KMY ಅನುಷ್ಠಾನ ಮತ್ತು ಸಂಪರ್ಕಕ್ಕಾಗಿ ₹540.66 ಕೋಟಿಗಳನ್ನು ಬಳಸಲಾಗಿದೆ.

Leave a Reply

Your email address will not be published. Required fields are marked *