ಪರ್ಫೆಕ್ಟ್ ‘ಚಹಾ’ ತಯಾರಿಸೋದು ಹೇಗೆ ಗೊತ್ತಾ? 90% ಜನರು ತಪ್ಪು ರೀತಿಯಲ್ಲಿ ‘ಟೀ’ ತಯಾರಿಸ್ತಾರೆ!
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಬೇಕೇ ಬೇಕು. ಮನಸ್ಸು ರಿಫ್ರೆಶ್ ಮಾಡುವುದರಿಂದ ಹಿಡಿದು ಆಯಾಸ ಹೋಗಲಾಡಿಸುವವರೆಗೆ, ಚಹಾ ನಮ್ಮ ಜೀವನಶೈಲಿಯ ಭಾಗವಾಗಿದೆ. ಕಚೇರಿಗೆ ಹೋಗುವಾಗ, ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ, ಸಂಜೆ, ಸುಖ, ಸೂತಕ ಚಹಾವು ಪ್ರತಿಯೊಂದು ಸಂದರ್ಭವನ್ನ ವಿಶೇಷವಾಗಿಸುತ್ತದೆ. ಅದ್ರಂತೆ, ಭಾರತದಲ್ಲಿ, ಚಹಾ ಕೇವಲ ಪಾನೀಯವಲ್ಲ, ಭಾವನೆಯಾಗಿದೆ. ಆದ್ರೆ, ಚಹಾದ ರುಚಿ ನೀವದನ್ನು ಹೇಗೆ ಮಾಡ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಹೌದು, ಚಹಾ ಪುಡಿ, ಸಕ್ಕರೆ ಮತ್ತು ಹಾಲು ಸೇರಿಸಿದ ಮಾತ್ರ ಪರ್ಫೆಕ್ಟ್ ಚಹಾ ತಯಾರಾಗೋದಿಲ್ಲ. ಇವುಗಳನ್ನ ಸೇರಿಸುವ ಸರಿಯಾದ ಸಮಯವು ನಿಮ್ಮ ಚಹಾ ಎಷ್ಟು ರುಚಿಕರ ಮತ್ತು ಪರಿಪೂರ್ಣವಾಗಿರುತ್ತದೆ ಎಂಬುದನ್ನ ನಿರ್ಧರಿಸುತ್ತದೆ. ಒಂದು ಕಪ್ ಅತ್ಯುತ್ತಮ ಚಹಾ ದಿನವನ್ನ ತಾಜಾವನ್ನಾಗಿಸುತ್ತೆ. ಹಾಗಿದ್ರೆ, ರುಚಿಕರ ಚಹಾ ತಯಾರಿಸುವ ವಿಧಾನವೇನು ತಿಳಿಯೋಣಾ ಬನ್ನಿ.
ಪರ್ಫೆಕ್ಟ್ ಚಹಾ ತಯಾರಿಸುವುದು ಹೇಗೆ.?
ಅನೇಕ ಜನರು ಚಹಾ ತಯಾರಿಸುವುದು ಸುಲಭ ಎಂದುಕೊಂಡಿದ್ದು, ನೀರು, ಹಾಲು, ಚಹಾ ಪುಡಿ ಮತ್ತು ಸಕ್ಕರೆ ಸೇರಿಸಿದ್ರೆ ಸಾಕು ಚಹಾ ಸಿದ್ಧವಾಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ, ವಾಸ್ತವವಾಗಿ ಚಹಾ ತಯಾರಿಸುವುದು ಒಂದು ಕಲೆ. ಸರಿಯಾದ ಹಂತಗಳಲ್ಲಿ ತಯಾರಿಸಿದ್ರೆ, ಅದರ ರುಚಿ ಹಲವು ಪಟ್ಟು ಹೆಚ್ಚಾಗುತ್ತದೆ.
ಹಂತ 1 : ನೀರು ಮತ್ತು ಚಹಾ ಪುಡಿ.!
ಚಹಾ ತಯಾರಿಸಲು ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ನೀರು ಕುದಿಯುವಾಗ, ಅದಕ್ಕೆ ಚಹಾ ಪುಡಿ ಸೇರಿಸಿ. ಸುಮಾರು 5 ನಿಮಿಷಗಳ ಕಾಲ ಕುದಿಯಲು ಬಿಡಿ. ಈ ಸಮಯದಲ್ಲಿ ನಿಮಗೆ ಬೇಕಿದ್ರೆ, ನೀವು ಶುಂಠಿ ಅಥವಾ ಏಲಕ್ಕಿಯನ್ನ ಕೂಡ ಸೇರಿಸಬಹುದು. ಇದು ಚಹಾದ ರುಚಿಯನ್ನ ಇನ್ನಷ್ಟು ವಿಶೇಷವಾಗಿಸುತ್ತದೆ.
ಹಂತ 2 : ಸಕ್ಕರೆ ಯಾವಾಗ ಸೇರಿಸಬೇಕು.?
ಹೆಚ್ಚಿನ ಜನರು ಹಾಲಿನ ನಂತರ ಸಕ್ಕರೆ ಸೇರಿಸುವ ತಪ್ಪು ಮಾಡುತ್ತಾರೆ. ಆದ್ರೆ, ಸರಿಯಾದ ಸಮಯವೆಂದರೆ ನೀರು ಮತ್ತು ಚಹಾ ಪುಡಿ ಸರಿಯಾಗಿ ಕುದ್ದ ನಂತ್ರ ನೀರಿನಲ್ಲಿ ಸುವಾಸನೆ ಚೆನ್ನಾಗಿ ಹೀರಿಕೊಂಡ ನಂತರ, ಸಕ್ಕರೆ ಸೇರಿಸಿ ಪೂರ್ತಿಯಾಗಿ ಕರಗಲು ಬಿಡಿ.
ಹಂತ 3 : ಹಾಲು ಸೇರಿಸಲು ಸರಿಯಾದ ಸಮಯ.?
ಸಕ್ಕರೆ ಕರಗಿದ ನಂತರ, ಹಾಲು ಸೇರಿಸಿ. ಇದಾದ ನಂತರ, ಚಹಾವನ್ನ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ಕ್ರಮೇಣ ಚಹಾದ ಬಣ್ಣ ಗಾಢವಾಗುತ್ತದೆ ಮತ್ತು ರುಚಿ ಹೆಚ್ಚುತ್ತದೆ. ಇದು ಪರಿಪೂರ್ಣ ಚಹಾದ ನಿಜವಾದ ರಹಸ್ಯ.
ಜನರು ಮಾಡುವ ಸಾಮಾನ್ಯ ತಪ್ಪು ಅಂದ್ರೆ ನೀರು, ಹಾಲು, ಚಹಾ ಪುಡಿ ಮತ್ತು ಸಕ್ಕರೆ ಎಲ್ಲವನ್ನು ಒಟ್ಟಿಗೆ ಸೇರಿಸುವುದು. ಆದ್ರೆ, ಇದ್ರಿಂದ ಚಹಾದ ರುಚಿ ಹಾಳಾಗುತ್ತದೆ. ಇನ್ನು ಅನೇಕರು ಹೆಚ್ಚು ಹೊತ್ತು ಕುದಿಸುವುದರಿಂದ ಚಹಾ ರುಚಿ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ, ಇದು ಚಹಾವನ್ನ ಕಹಿ ಮಾಡುತ್ತದೆ. ಇದ್ರಿಂದ ಗ್ಯಾಸ್ ಮತ್ತು ಆಮ್ಲೀಯತೆಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಅಂದ್ಹಾಗೆ, ಸರಿಯಾದ ರೀತಿಯಲ್ಲಿ ತಯಾರಿಸಿದ ಚಹಾ ನಿಮಗೆ ತಾಜಾತನ, ಶಕ್ತಿ ಮತ್ತು ಮನಸ್ಥಿತಿಯನ್ನ ಹೆಚ್ಚಿಸುತ್ತದೆ. ಆದ್ರೆ, ತಪ್ಪು ರೀತಿಯಲ್ಲಿ ತಯಾರಿಸಿದ ಚಹಾವು ಹೊಟ್ಟೆಯ ಸಮಸ್ಯೆಗಳು ಮತ್ತು ಆಮ್ಲೀಯತೆಯನ್ನ ಹೆಚ್ಚಿಸುತ್ತದೆ. ಆದ್ದರಿಂದ ಯಾವಾಗಲೂ ಚಹಾ ಪುಡಿ, ಹಾಲು ಮತ್ತು ಸಕ್ಕರೆಯನ್ನ ಸಮತೋಲಿತ ಪ್ರಮಾಣದಲ್ಲಿ ಬಳಸಿ.
