National

ರೈಲುಗಳಲ್ಲಿ ಇನ್ಮುಂದೆ ಇವರಿಗೆ ಜೀವನಪೂರ್ತಿ ಉಚಿತ ಪ್ರಯಾಣ ; ಕೇಂದ್ರ ಸರ್ಕಾರ ಮಹತ್ವದ ಆದೇಶ!

ನವದೆಹಲಿ : ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ದೇಶದ ರಕ್ಷಣೆಗಾಗಿ ಅದಮ್ಯ ಧೈರ್ಯ, ಸಾಹಸ ಪ್ರದರ್ಶಿಸಿದ ವೀರ ಯೋಧರಿಗೆ ಕೊಡುಗೆ ನೀಡಿದೆ. ಅದರಂತೆ, ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರು ಮತ್ತವರ ಕುಟುಂಬ ಸದಸ್ಯರಿಗೆ ರೈಲುಗಳ ಎಸಿ ಬೋಗಿಗಳಲ್ಲಿ ಜೀವನಪರ್ಯಂತ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಿದೆ. ಇನ್ನು ಈ ಹೊಸ ನಿಯಮವು ನವೆಂಬರ್ 1ರಿಂದ ಜಾರಿಗೆ ಬರಲಿದೆ.

ಭಾರತೀಯ ರೈಲ್ವೆ ಇಲಾಖೆಯ ಈ ಮಹತ್ವದ ಕೊಡುಗೆಯನ್ನ ಸೇನಾ ಪದಕ, ನೌಕಾ ಸೇನಾ ಪದಕ ಹಾಗೂ ವಾಯುಸೇನಾ ಪದಕ ಪಡೆದ ಯೋಧರು ಪಡೆಯಲಿದ್ದಾರೆ. ವಿಶೇಷ ಅಂದ್ರೆ ಪ್ರಸ್ತುತ ಸೇವೆಯಲ್ಲಿರುವ ಸೈನಿಕರು ಹಾಗೂ ನಿವೃತ್ತ ಯೋಧರಿಬ್ಬರಿಗೂ ಇದು ಅನ್ವಯಿಸಲಿದೆ.

Leave a Reply

Your email address will not be published. Required fields are marked *