State

ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ; ಇನ್ಮುಂದೆ ಕಚೇರಿ ಸುತ್ತಾಬೇಕಿಲ್ಲ, ಜ.1ರಿಂದ ರಾಜ್ಯಾದ್ಯಂತ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆ ಜಾರಿ!

Spread the love

ಬೆಂಗಳೂರು: ಸೈಟು, ಮನೆ ಅಥವಾ ಕೃಷಿ ಜಮೀನುಗಳನ್ನು ನೋಂದಣಿ (Property Registration) ಮಾಡಿಸಲು ಕಾಗದ-ಪತ್ರಗಳ ಕಂತೆಗಳನ್ನು ಹೊತ್ತುಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿನಗಟ್ಟಲೆ ಅಲೆಯುವ ಕಿರಿಕಿರಿಗೆ ಕರ್ನಾಟಕ ಸರ್ಕಾರವು ಶಾಶ್ವತ ಬ್ರೇಕ್ ಹಾಕಿದೆ. ರಾಜ್ಯದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಐತಿಹಾಸಿಕ ಆಡಳಿತ ಸುಧಾರಣೆ ತಂದಿರುವ ಸರ್ಕಾರ, ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣ ‘ಕಾಗದರಹಿತ ಆಸ್ತಿ ನೋಂದಣಿ’ (Paperless Property Registration) ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿದೆ.

ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ಕಳೆದ 7 ತಿಂಗಳಿಂದ ನಡೆಸಲಾದ ಪ್ರಾಯೋಗಿಕ ಯೋಜನೆ (Pilot Project) ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ಮುಂಬರುವ 2027ರ ಜನವರಿ 1 ರಿಂದ ರಾಜ್ಯದ ಎಲ್ಲಾ 31 ಜಿಲ್ಲೆಗಳ 256 ಉಪ ನೋಂದಣಾಧಿಕಾರಿ ಕಚೇರಿಗಳಿಗೂ ಈ ಡಿಜಿಟಲ್ ಕ್ರಾಂತಿಯನ್ನು ವಿಸ್ತರಿಸಲಾಗುತ್ತಿದೆ.

ಈ ಮೂಲಕ ನೂರಕ್ಕೆ ನೂರರಷ್ಟು ಕಾಗದರಹಿತ ಆಸ್ತಿ ನೋಂದಣಿ ಜಾರಿಗೊಳಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

ಹೊಸ ಪೇಪರ್‌ಲೆಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? (4 ಪ್ರಮುಖ ಹಂತಗಳು) : ಕಾವೇರಿ 2.0 ಪೋರ್ಟಲ್ ಮೂಲಕ ಕರಡು ಸಲ್ಲಿಕೆ, ಆನ್‌ಲೈನ್ ಪರಿಶೀಲನೆ, ಆಧಾರ್ ಇ-ಸೈನ್ ಮತ್ತು ಕೇವಲ ಗುರುತು ದೃಢೀಕರಣಕ್ಕಾಗಿ ಕಚೇರಿ ಭೇಟಿಯೊಂದಿಗೆ 4 ಸರಳ ಹಂತಗಳಲ್ಲಿ ಈ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಸಾರ್ವಜನಿಕರಿಗೆ ಸಿಗುವ ಬಂಪರ್ ಲಾಭಗಳು.!

• ಭ್ರಷ್ಟಾಚಾರಕ್ಕೆ ಬ್ರೇಕ್ : ಆನ್‌ಲೈನ್‌ನಲ್ಲೇ ನೋಂದಣಿ ಶುಲ್ಕ ಪಾವತಿಯಾಗುವುದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಲಂಚಾವತಾರಕ್ಕೆ ಕಡಿವಾಣ ಬೀಳಲಿದೆ.

• ಸುರಕ್ಷಿತ ದಾಖಲೆಗಳು : ದಾಖಲೆಗಳು ‘ಕರ್ನಾಟಕ ನೋಂದಾಯಿತ ದಸ್ತಾವೇಜು ಸಂಗ್ರಹಾಲಯ’ದಲ್ಲಿ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸುರಕ್ಷಿತವಾಗಿರುತ್ತವೆ.

• ಮನೆಯಲ್ಲೇ ಡೌನ್‌ಲೋಡ್ : ನೋಂದಣಿ ಮುಗಿದ ಬಳಿಕ ಆಸ್ತಿ ಪತ್ರವನ್ನು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಪ್ರತ್ಯೇಕ ‘ನೂತನ ಐಟಿ ಸೆಲ್’ ರಚಿಸಲಾಗಿದೆ.

ಬ್ಯಾಂಕ್ ಸಾಲ ಪಡೆಯುವುದು ಇನ್ಮುಂದೆ ಅತ್ಯಂತ ಸುಲಭ: ಆಸ್ತಿ ಅಡಮಾನವಿಟ್ಟು ಅಥವಾ ಹೊಸ ಮನೆ ಖರೀದಿಸಲು ಬ್ಯಾಂಕುಗಳಿಂದ ಸಾಲ ಪಡೆಯುವಾಗ, ಬ್ಯಾಂಕ್ ಅಧಿಕಾರಿಗಳು ಈ ಡಿಜಿಟಲ್ ನೋಂದಾಯಿತ ದಾಖಲೆಗಳ ಅಸಲಿಯತ್ತನ್ನು ಕಾವೇರಿ 2.0 ಪೋರ್ಟಲ್ ಮೂಲಕ ನೇರವಾಗಿ ಕೇವಲ ಕೆಲವೇ ಸೆಕೆಂಡುಗಳಲ್ಲಿ ಪರಿಶೀಲಿಸಬಹುದು. ಇದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಹಾಗೂ ಬ್ಯಾಂಕುಗಳಿಗೆ ವಂಚಿಸುವ ಜಾಲಕ್ಕೆ ಸಂಪೂರ್ಣವಾಗಿ ಬ್ರೇಕ್ ಬೀಳಲಿದೆ. ನಾಗರಿಕ ಸ್ನೇಹಿ, ಪಾರದರ್ಶಕ ಹಾಗೂ ತಂತ್ರಜ್ಞಾನಾಧಾರಿತ ಆಡಳಿತ ನೀಡುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯು ಸಾರ್ವಜನಿಕರ ಅಲೆದಾಟ ತಪ್ಪಿಸಿ ಭಾರಿ ನಿರಾಳತೆ ತರಲಿದೆ.

ಹೊಸ ಕಾಗದರಹಿತ ವ್ಯವಸ್ಥೆಯ 4 ಪ್ರಮುಖ ಹಂತಗಳು.!

ಈ ನೂತನ ಪೇಪರ್‌ಲೆಸ್ ತಂತ್ರಜ್ಞಾನದ ಅಡಿಯಲ್ಲಿ ಸಾರ್ವಜನಿಕರು ಕೇವಲ ನಾಲ್ಕು ಸರಳ ಹಂತಗಳ ಮೂಲಕ ತಮ್ಮ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಅತ್ಯಂತ ಸುಲಭವಾಗಿ ಪೂರ್ಣಗೊಳಿಸಬಹುದು.

1. ಆನ್‌ಲೈನ್ ಕರಡು ಸಲ್ಲಿಕೆ : ನಾಗರಿಕರು ಮೊದಲು ಸರ್ಕಾರದ ಅಧಿಕೃತ ‘ಕಾವೇರಿ 2.0’ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಆಸ್ತಿ ದಸ್ತಾವೇಜಿನ ಕರಡನ್ನು (Draft) ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಬೇಕು.

2. ಪೂರ್ವ ಪರಿಶೀಲನೆ : ಅಪ್‌ಲೋಡ್ ಆದ ತಕ್ಷಣವೇ ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಆನ್‌ಲೈನ್‌ನಲ್ಲಿಯೇ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಲೋಪದೋಷಗಳಿದ್ದರೆ ನೋಂದಣಿಗೆ ಮುನ್ನವೇ ಸರಿಪಡಿಸಲು ಅರ್ಜಿದಾರರಿಗೆ ಹಿಂತಿರುಗಿಸಲಾಗುತ್ತದೆ.

3. ಆಧಾರ್ ಡಿಜಿಟಲ್ ಸಹಿ : ಕಕ್ಷಿದಾರರು ಹಾಗೂ ಸಾಕ್ಷಿಗಳು ಪೆನ್ನಿನಿಂದ ಸಹಿ ಮಾಡುವ ಬದಲು, ಆಧಾರ್ ಆಧಾರಿತ ಇ-ಸೈನ್ (e-Sign) ಮೂಲಕ ಕೆಲವೇ ಸೆಕೆಂಡುಗಳಲ್ಲಿ ಡಿಜಿಟಲ್ ಸಹಿ ಪ್ರಕ್ರಿಯೆ ಮುಗಿಸಬಹುದು.

4. ಕೇವಲ 5 ನಿಮಿಷದ ಕಚೇರಿ ಕೆಲಸ : ಸಬ್ ರಿಜಿಸ್ಟ್ರಾರ್ ಕಚೇರಿಗೆ ಕೇವಲ ಐಡಿ ವೆರಿಫಿಕೇಶನ್‌ಗಾಗಿ (ಗುರುತು ದೃಢೀಕರಣ) ಮಾತ್ರ ಹೋಗಬೇಕಾಗುತ್ತದೆ. ಅಲ್ಲಿ ಕಕ್ಷಿದಾರರ ಲೈವ್ ಫೋಟೋ ಮತ್ತು ಬಯೋಮೆಟ್ರಿಕ್ ಬೆರಳಚ್ಚು ಪಡೆದು ಕೇವಲ 5 ನಿಮಿಷಗಳಲ್ಲಿ ನೋಂದಣಿ ಪೂರ್ಣಗೊಳಿಸಲಾಗುತ್ತದೆ.

Leave a Reply

Your email address will not be published. Required fields are marked *