SchemesState

BPL ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ; ರಾಜ್ಯಾದ್ಯಂತ 15 ಲಕ್ಷ ಉಚಿತ ಸೈಟ್, 1 ಲಕ್ಷ ಹೊಸ ಮನೆಗಳ ನಿರ್ಮಾಣ, ತಕ್ಷಣ ಅರ್ಜಿ ಸಲ್ಲಿಸಿ!

Spread the love

ಬೆಂಗಳೂರು: ರಾಜ್ಯದ ನಿವೇಶನ ರಹಿತ ಬಡ ಹಾಗೂ ಶ್ರಮಿಕ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಸಿಹಿ ಸುದ್ದಿಯೊಂದನ್ನು ನೀಡಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ವಸತಿ ಮತ್ತು ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಬರೋಬ್ಬರಿ 15 ಲಕ್ಷ ಉಚಿತ ನಿವೇಶನಗಳು, ವಸತಿ ಇಲಾಖೆಯಿಂದ 1 ಲಕ್ಷ ಹೊಸ ಮನೆಗಳು ಹಾಗೂ ಮುಖ್ಯಮಂತ್ರಿ ‘ನಮ್ಮ ಮನೆ’ ಯೋಜನೆಯಡಿ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ವಿತರಿಸಲು ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

ಈ ಬೃಹತ್ ವಸತಿ ಕ್ರಾಂತಿಯ ಮೂಲಕ ರಾಜ್ಯದ ಸುಮಾರು 16 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ‘ಭೂ ಗ್ಯಾರಂಟಿ’ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

3 ಹಂತಗಳಲ್ಲಿ 15 ಲಕ್ಷ ಉಚಿತ ನಿವೇಶನ ಹಂಚಿಕೆ :
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಕಂದಾಯ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಒಟ್ಟು 15 ಲಕ್ಷ ನಿವೇಶನಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇದಕ್ಕಾಗಿ ಈಗಾಗಲೇ ರಾಜ್ಯಾದ್ಯಂತ 24,000 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ.

ಮೊದಲ ಹಂತದಲ್ಲಿ 5 ಲಕ್ಷ, ಎರಡನೇ ಹಂತದಲ್ಲಿ 5 ಲಕ್ಷ ಹಾಗೂ ಮೂರನೇ ಹಂತದಲ್ಲಿ 5 ಲಕ್ಷ ನಿವೇಶನಗಳಂತೆ ಒಟ್ಟು 15 ಲಕ್ಷ ನಿವೇಶನಗಳನ್ನು ಇದೇ ಸರ್ಕಾರದ ಅವಧಿಯಲ್ಲಿ ಹಂಚಿಕೆ ಮಾಡಲಾಗುವುದು.

ಕಡ್ಡಾಯ ಅರ್ಹತೆ: ಈ ಉಚಿತ ನಿವೇಶನಗಳನ್ನು ಪಡೆಯಲು ಅರ್ಜಿದಾರರು ಕಡ್ಡಾಯವಾಗಿ ಬಿಪಿಎಲ್ (BPL) ಪಡಿತರ ಚೀಟಿಯನ್ನು ಹೊಂದಿರಬೇಕು, ನಿವೇಶನ ರಹಿತರಾಗಿರಬೇಕು ಮತ್ತು ಸರ್ಕಾರ ನಿಗದಿಪಡಿಸಿದ ಆದಾಯ ಮಿತಿಯೊಳಗಿರಬೇಕು.

1 ಲಕ್ಷ ಹೊಸ ಮನೆ ನಿರ್ಮಾಣ ಹಾಗೂ ಸಹಾಯಧನ ಹೆಚ್ಚಳ
: ರಾಜ್ಯದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬರೋಬ್ಬರಿ ₹2,241 ಕೋಟಿ ವೆಚ್ಚದಲ್ಲಿ 1 ಲಕ್ಷ ಹೊಸ ಮನೆಗಳನ್ನು ನಿರ್ಮಿಸಲು ಸಂಪುಟ ಗುರಿ ನಿಗದಿಪಡಿಸಿದೆ. ಇದೇ ವೇಳೆ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ವಸತಿ ಸಹಾಯಧನವನ್ನೂ ಹೆಚ್ಚಿಸಲಾಗಿದೆ:

ಸಾಮಾನ್ಯ ವರ್ಗದ ಫಲಾನುಭವಿಗಳು : ಈ ಹಿಂದೆ ನೀಡಲಾಗುತ್ತಿದ್ದ ₹1.20 ಲಕ್ಷ ಸಹಾಯಧನವನ್ನು ಈಗ ₹2 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ (SC/ST) : ಈ ವರ್ಗದ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಸಹಾಯಧನವನ್ನು ₹3 ಲಕ್ಷಕ್ಕೆ ನಿಗದಿಪಡಿಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

‘ನಮ್ಮ ಮನೆ’ ಯೋಜನೆಯಡಿ ಶೇ.50 ರಿಯಾಯಿತಿ ದರದಲ್ಲಿ ಸೈಟ್:
ಮುಖ್ಯಮಂತ್ರಿ ‘ನಮ್ಮ ಮನೆ’ ಯೋಜನೆಯಡಿಯಲ್ಲಿ ರಾಜ್ಯದ ಶ್ರಮಿಕ ವರ್ಗದವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ (EWS) ಶೇ.50 ರಷ್ಟು ಭಾರಿ ರಿಯಾಯಿತಿ ದರದಲ್ಲಿ 30×40 ಅಡಿ ಅಳತೆಯ ಒಟ್ಟು 30,000 ನಿವೇಶನಗಳನ್ನು ವಿತರಿಸಲು ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಬಡಾವಣೆಗಳ ಅಭಿವೃದ್ಧಿಗೆ ತಗಲುವ ವೆಚ್ಚದ ವಿವರಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು : ಈ ಉಚಿತ ನಿವೇಶನ ಮತ್ತು ವಸತಿ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಅರ್ಹ ಫಲಾನುಭವಿಗಳು, ಸರ್ಕಾರದಿಂದ ಅಧಿಕೃತ ಅರ್ಜಿ ಆಹ್ವಾನಿಸಿದ ತಕ್ಷಣ ಆನ್‌ಲೈನ್ ಅಥವಾ ಗ್ರಾಮ ಪಂಚಾಯತಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಪ್ರಮುಖವಾಗಿ ಬಿಪಿಎಲ್ ಪಡಿತರ ಚೀಟಿ (BPL Ration Card), ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ನಿವೇಶನ ರಹಿತ ದೃಢೀಕರಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ.

Leave a Reply

Your email address will not be published. Required fields are marked *