ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ : ₹80,000 ‘ಇನ್ಸ್ಪೈರ್ ವಿದ್ಯಾರ್ಥಿವೇತನ’ಕ್ಕೆ ಅರ್ಜಿ ಆರಂಭ, ಬೇಗ ಅಪ್ಲೈ ಮಾಡಿ!
ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವೊಂದನ್ನು ನೀಡಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಲಾಖೆಯು (DST), ‘ಇನ್ಸ್ಪೈರ್’ (INSPIRE-SHE Scholarship) ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಆಯ್ಕೆಯಾಗುವ ಒಟ್ಟು 12,000 ವಿದ್ಯಾರ್ಥಿಗಳಿಗೆ ವಾರ್ಷಿಕ ₹80,000 ಆರ್ಥಿಕ ನೆರವು ಸಿಗಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? (Eligibility Criteria)
ಈ ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ಪ್ರಮುಖ ಅರ್ಹತೆಗಳನ್ನು ಹೊಂದಿರಬೇಕು.
• ವಯೋಮಿತಿ: ಅರ್ಜಿದಾರರು 17 ರಿಂದ 22 ವರ್ಷದ ಒಳಗಿನವರಾಗಿರಬೇಕು.
• ವಿದ್ಯಾರ್ಹತೆ: 12ನೇ ತರಗತಿ (ಪಿಯುಸಿ) ಪರೀಕ್ಷೆಯಲ್ಲಿ ಆಯಾ ರಾಜ್ಯ ಅಥವಾ ಕೇಂದ್ರ ಶಿಕ್ಷಣ ಮಂಡಳಿಯ ಟಾಪ್ ಶೇ.1ರಷ್ಟು ಫಲಿತಾಂಶ ಗಳಿಸಿದ ಟಾಪರ್ಗಳಿಗೆ ಮುಂಚೂಣಿ ಅವಕಾಶವಿರುತ್ತದೆ.
• ಸ್ಪರ್ಧಾತ್ಮಕ ಪರೀಕ್ಷೆಗಳು: ಕೇವಲ ಪಿಯುಸಿ ಅಂಕಗಳು ಮಾತ್ರವಲ್ಲದೆ, JEE Main, JEE Advanced ಅಥವಾ NEET ಪರೀಕ್ಷೆಗಳಲ್ಲಿ ದೇಶದ ಟಾಪ್ 10,000 ರ್ಯಾಂಕ್ ಗಳಿಸಿದವರಿಗೂ ಇದು ಅನ್ವಯವಾಗುತ್ತದೆ.
• ಕೋರ್ಸ್ಗಳ ವಿವರ: ಪ್ರಸ್ತುತ ಬಿಎಸ್ಸಿ (BSc), ಬಿಎಸ್ (BS), ಅಥವಾ ಇಂಟಿಗ್ರೇಟೆಡ್ ಎಂಎಸ್ಸಿ (Integrated MSc) ನಂತಹ ನೈಸರ್ಗಿಕ ಮತ್ತು ಮೂಲ ವಿಜ್ಞಾನ ಕೋರ್ಸ್ಗಳಿಗೆ ಪ್ರವೇಶ ಪಡೆದಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಭೂವಿಜ್ಞಾನದಂತಹ ವಿಷಯಗಳು ಇದರ ವ್ಯಾಪ್ತಿಗೆ ಬರುತ್ತವೆ.
ವಾರ್ಷಿಕ ₹80,000 ಸಹಾಯಧನ ಸಿಗುವುದು ಹೇಗೆ?
ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರವು ಈ ಕೆಳಗಿನ ಹಣದ ವಿಭಜನೆಯ ಪ್ರಕಾರ ಆರ್ಥಿಕ ನೆರವನ್ನು ಒದಗಿಸುತ್ತದೆ.
• ನಿಯಮಿತ ಸ್ಕಾಲರ್ಶಿಪ್: ಮಾಸಿಕ ₹5,000 ರಂತೆ ವರ್ಷಕ್ಕೆ ಒಟ್ಟು ₹60,000 ಹಣ ಸಿಗಲಿದೆ.
• ಬೇಸಿಗೆ ಸಂಶೋಧನಾ ಅನುದಾನ: ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬೇಸಿಗೆ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ₹20,000 ಪ್ರೋತ್ಸಾಹಧನ ನೀಡಲಾಗುತ್ತದೆ.
• ಅವಧಿ: ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಮೊದಲ ವರ್ಷದಿಂದ ಗರಿಷ್ಠ 5 ವರ್ಷಗಳ ಅವಧಿಯವರೆಗೆ ಇದನ್ನು ಪಡೆದುಕೊಳ್ಳಬಹುದು. ಆದರೆ ಪ್ರತಿ ವರ್ಷ ಶೈಕ್ಷಣಿಕ ಸಾಧನೆ ಉತ್ತಮವಾಗಿರಬೇಕು.
ಅರ್ಜಿ ಸಲ್ಲಿಕೆ ಮತ್ತು ಕೊನೆಯ ದಿನಾಂಕ.!
ಅರ್ಹತೆ ಮತ್ತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕೊನೆಯ ದಿನಗಳ ವೆಬ್ಸೈಟ್ ಸರ್ವರ್ ದಟ್ಟಣೆಯ ಕಿರಿಕಿರಿ ತಪ್ಪಿಸಲು ಇಂದೇ ಅರ್ಜಿ ಸಲ್ಲಿಸುವುದು ಸೂಕ್ತ. ಆನ್ಲೈನ್ ಮೂಲಕ ಅಧಿಕೃತ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಲು ಡಿಸೆಂಬರ್ 7, 2026 ಕೊನೆಯ ದಿನಾಂಕವಾಗಿದೆ.ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಆನ್ಲೈನ್ ನೋಂದಣಿಗಾಗಿ ಕೇಂದ್ರ ಸರ್ಕಾರದ ಇಲಾಖೆಯ ಅಧಿಕೃತ ಪೋರ್ಟಲ್ ಆದ online-inspire.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು!
ಈ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಈ ಕೆಳಗಿನ ಪ್ರಮುಖ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
* ಅಂಕಪಟ್ಟಿ : 12ನೇ ತರಗತಿಯ (PUC) ಅಸಲಿ ಅಂಕಪಟ್ಟಿ ಮತ್ತು ಮಂಡಳಿಯಿಂದ ನೀಡಲಾದ ಅರ್ಹತಾ ಪ್ರಮಾಣ ಪತ್ರ.
* ಪ್ರವೇಶ ದಾಖಲೆ : ಪ್ರಸ್ತುತ ಬಿಎಸ್ಸಿ ಅಥವಾ ಇಂಟಿಗ್ರೇಟೆಡ್ ಕೋರ್ಸ್ಗೆ ಪ್ರವೇಶ ಪಡೆದಿರುವ ಕಾಲೇಜಿನ ಮುಖ್ಯಸ್ಥರ ಸಹಿ ಇರುವ ದೃಢೀಕರಣ ಪತ್ರ (Endorsement Form).
* ಗುರುತಿನ ಚೀಟಿ : ಅರ್ಜಿದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಪ್ರತಿ ಮತ್ತು ಇತ್ತೀಚಿನ ಭಾವಚಿತ್ರ.
* ರ್ಯಾಂಕ್ ಕಾರ್ಡ್ : ಒಂದು ವೇಳೆ ಕಾಂಪಿಟೇಟಿವ್ ಪರೀಕ್ಷೆ ಬರೆದಿದ್ದರೆ JEE ಅಥವಾ NEET ಪ್ರವೇಶ ಪತ್ರ ಮತ್ತು ರ್ಯಾಂಕ್ ಕಾರ್ಡ್ ಸಬ್ಮಿಟ್ ಮಾಡಬೇಕು.
