‘ಸಾಸಿವೆ ಎಣ್ಣೆ’ ಬಳಸುವುದರಿಂದ ಸಿಗುವ ಅದ್ಭುತ ಪ್ರಯೋಜನೆಗಳೇನು ಗೊತ್ತಾ? ಚರ್ಮ ಮತ್ತು ಕೂದಲಿಗೆ ಅತ್ಯದ್ಭುತ ಲಾಭ!
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬರ ಮನೆಯ ಅಡುಗೆ ಕೋಣೆಯಲ್ಲೂ ಸಾಸಿವೆ ಎಣ್ಣೆ (Mustard Oil) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಅಡುಗೆಯ ರುಚಿ ಹೆಚ್ಚಿಸಲು ಬಳಸುವ ಈ ಸಾಸಿವೆ ಎಣ್ಣೆಯು ಕೇವಲ ಆಹಾರಕ್ಕೆ ಮಾತ್ರವಲ್ಲದೆ, ನಮ್ಮ ಚರ್ಮ (Skin) ಮತ್ತು ಕೂದಲಿನ (Hair) ಸೌಂದರ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಒಂದು ಅದ್ಭುತ ಔಷಧಿಯಾಗಿ ಕೆಲಸ ಮಾಡುತ್ತದೆ. ಆದಾಗ್ಯೂ, ಸಾಸಿವೆ ಎಣ್ಣೆಯ ಕೆಲವು ಅಂಶಗಳು ಆರೋಗ್ಯ ಸಮಸ್ಯೆಗಳನ್ನ ಉಂಟು ಮಾಡಬಹುದು.
ಜನರು ಬಹಳ ಹಿಂದಿನಿಂದಲೂ ಅಡುಗೆ ಮತ್ತು ಪರ್ಯಾಯ ಔಷಧದಲ್ಲಿ ಸಾಸಿವೆ ಎಣ್ಣೆಯನ್ನು ಬಳಸುತ್ತಿದ್ದಾರೆ. ಇದು ಏಷ್ಯನ್, ವಿಶೇಷವಾಗಿ ಭಾರತೀಯ, ಪಾಕಪದ್ಧತಿಗಳಲ್ಲಿ ಸಾಮಾನ್ಯವಾಗಿದೆ. ಕೆಲವು ಸಂಶೋಧನೆಗಳು ಸಾಸಿವೆ ಎಣ್ಣೆಯು ಹೃದಯ ಸಂಬಂಧಿ ಪ್ರಯೋಜನಗಳು ಮತ್ತು ಉರಿಯೂತ ನಿವಾರಕ ಗುಣಗಳನ್ನ ಒಳಗೊಂಡಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ.
ಆಯುರ್ವೇದದ ಕಾಲದಿಂದಲೂ ಸೌಂದರ್ಯ ವರ್ಧಕವಾಗಿ ಬಳಕೆಯಲ್ಲಿರುವ ಸಾಸಿವೆ ಎಣ್ಣೆಯ ಪ್ರಮುಖ 5 ಆರೋಗ್ಯ ಮತ್ತು ಸೌಂದರ್ಯ ಲಾಭಗಳು ಇಲ್ಲಿವೆ.
1. ಒಣ ಚರ್ಮದ ಸಮಸ್ಯೆಗೆ ಮುಕ್ತಿ : ವಿಶೇಷವಾಗಿ ಚಳಿಗಾಲ ಆರಂಭವಾಗುತ್ತಿರುವ ಈ ಸಮಯದಲ್ಲಿ ಚರ್ಮವು ಒಣಗುವುದು (Dry Skin) ಮತ್ತು ಕಾಂತಿಹೀನವಾಗುವುದು ಸಾಮಾನ್ಯ. ಮಲಗುವ ಮುನ್ನ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಮುಖ ಹಾಗೂ ಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮವು ಒಳಗಿನಿಂದ ತೇವಾಂಶವನ್ನು ಪಡೆದು, ದಿನವಿಡೀ ಮೃದುವಾಗಿ ಮತ್ತು ಹೊಳೆಯುವಂತೆ ಇರುತ್ತದೆ.
2. ಕೂದಲಿನ ಬೆಳವಣಿಗೆ ಮತ್ತು ಹೊಳಪು : ಸಾಸಿವೆ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿವೆ. ವಾರಕ್ಕೆ ಎರಡು ಬಾರಿ ಸಾಸಿವೆ ಎಣ್ಣೆಯನ್ನು ಸ್ವಲ್ಪ ಉಗುರುಬೆಚ್ಚಗಾಗಿಸಿ ಕೂದಲಿನ ಬುಡಕ್ಕೆ ನೀಟಾಗಿ ಮಸಾಜ್ ಮಾಡುವುದರಿಂದ ನೆತ್ತಿಯ ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಇದು ಕೂದಲು ಉದರುವುದನ್ನು ತಡೆದು, ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
3. ಮುಖದ ಕಪ್ಪು ಕಲೆಗಳು ನಿವಾರಣೆ : ಸಾಸಿವೆ ಎಣ್ಣೆಗೆ ಸ್ವಲ್ಪ ಕಡಲೆಹಿಟ್ಟು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ತೊಳೆದರೆ ಮುಖದ ಮೇಲಿರುವ ಕಪ್ಪು ಕಲೆಗಳು, ಟ್ಯಾನ್ (Sun Tan) ಅತ್ಯಂತ ವೇಗವಾಗಿ ನಿವಾರಣೆಯಾಗಿ ಮುಖದ ರಂಗು ಹೆಚ್ಚುತ್ತದೆ.
4. ತುಟಿಗಳ ಸೌಂದರ್ಯಕ್ಕೆ ರಾಮಬಾಣ : ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಮತ್ತು ರಕ್ತ ಬರುವುದು ಸಾಮಾನ್ಯ. ರಾತ್ರಿ ಮಲಗುವ ಮುನ್ನ ನಿಮ್ಮ ಹೊಕ್ಕುಳ ಜಾಗಕ್ಕೆ (Navel) ಎರಡು ಹನಿ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಒಡೆದ ತುಟಿಗಳು ತಾವಾಗಿಯೇ ವಾಸಿಯಾಗಿ, ನೈಸರ್ಗಿಕವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ ಎನ್ನುತ್ತದೆ ಆಯುರ್ವೇದ.
5. ಅಕಾಲಿಕ ನರೆಗೂದಲಿಗೆ ಬ್ರೇಕ್ : ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವ (Grey Hair) ತೊಂದರೆ ಇರುವವರಿಗೆ ಸಾಸಿವೆ ಎಣ್ಣೆ ಅತ್ಯುತ್ತಮ ಪರಿಹಾರ. ಇದು ಕೂದಲಿನ ನೈಸರ್ಗಿಕ ಮೆಲನಿನ್ ಬಣ್ಣವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.
ಶುದ್ಧ ಸಾಸಿವೆ ಎಣ್ಣೆ ಮಸಾಜ್
3-4 ಚಮಚ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ.
10-15 ನಿಮಿಷಗಳ ಕಾಲ ನೆತ್ತಿಗೆ ಮಸಾಜ್ ಮಾಡಿ.
ಉತ್ತಮ ಹೀರಿಕೊಳ್ಳುವಿಕೆಗಾಗಿ ತಲೆಯ ಸುತ್ತಲೂ ಬೆಚ್ಚಗಿನ ಟವಲ್ ಕಟ್ಟಿಕೊಳ್ಳಿ.
1-2 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಬಿಡಿ.
ಬೆಳಿಗ್ಗೆ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ಸಾಸಿವೆ ಎಣ್ಣೆ + ತೆಂಗಿನ ಎಣ್ಣೆ ಮಿಶ್ರಣ
ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ.
ಬೇರುಗಳಿಂದ ತುದಿಗಳವರೆಗೆ ಹಚ್ಚಿ.
ತೊಳೆಯುವ ಮೊದಲು 1-2 ಗಂಟೆಗಳ ಕಾಲ ಹಾಗೆಯೇ ಬಿಡಿ.
ಮೆಂತ್ಯ + ಸಾಸಿವೆ ಎಣ್ಣೆ ಮಿಶ್ರಣ
3 ಚಮಚ ಸಾಸಿವೆ ಎಣ್ಣೆಯನ್ನು 1 ಚಮಚ ಮೆಂತ್ಯದೊಂದಿಗೆ ಬಿಸಿ ಮಾಡಿ.
ಸೋಸಿ, ತಣ್ಣಗಾಗಿಸಿ, ಸಂಗ್ರಹಿಸಿ.
ತಲೆಹೊಟ್ಟು ನಿಯಂತ್ರಣಕ್ಕಾಗಿ ವಾರಕ್ಕೆ ಎರಡು ಬಾರಿ ನೆತ್ತಿಗೆ ಮಸಾಜ್ ಮಾಡಿ.
ಸಾಸಿವೆ ಎಣ್ಣೆ + ಅಲೋವೆರಾ ಜೆಲ್
2 ಚಮಚ ಸಾಸಿವೆ ಎಣ್ಣೆಯನ್ನು 2 ಚಮಚ ಅಲೋವೆರಾ ಜೆಲ್ ನೊಂದಿಗೆ ಮಿಶ್ರಣ ಮಾಡಿ.
ನೆತ್ತಿ ಮತ್ತು ಎಳೆಗಳಾದ್ಯಂತ ಸಮವಾಗಿ ಹಚ್ಚಿ.
ತೊಳೆಯುವ ಮೊದಲು 30 ನಿಮಿಷಗಳ ಕಾಲ ಬಿಡಿ.
