FarmerNationalState

ರೈತರೇ ಗಮನಿಸಿ ; ಬೆಳೆ ಹಾನಿ ಪರಿಹಾರ ಪಡೆಯಲು ‘ಫಸಲ್ ಬಿಮಾ ಯೋಜನೆ’ಗೆ ಇಂದೇ ಅರ್ಜಿ ಸಲ್ಲಿಸಿ!

Spread the love

ನವದೆಹಲಿ : ದೇಶದ ರೈತರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದ್ರಲ್ಲಿ ಮಹತ್ವದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯೂ ಒಂದು. ಅದ್ರಂತೆ, ಕೃಷಿ ವಲಯದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪಗಳು, ಅಕಾಲಿಕ ಮಳೆ ಹಾಗೂ ಬರಗಾಲದಂತಹ ಸಂದರ್ಭಗಳಲ್ಲಿ ಆರ್ಥಿಕ ರಕ್ಷಣೆ ನೀಡಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ “ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ”ಯ (PM Fasal Bima Yojana 2026) ಅಡಿಯಲ್ಲಿ ಹೊಸದಾಗಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಮುಂದುವರಿಸಿದೆ.

ಯೋಜನೆಯಡಿ ನೋಂದಾಯಿಸಿಕೊಳ್ಳುವ ಅರ್ಹ ರೈತರಿಗೆ ಬೆಳೆ ನಷ್ಟ ಉಂಟಾದಾಗ ಸರ್ಕಾರದಿಂದ ನೇರ ನಗದು ವರ್ಗಾವಣೆ (DBT) ಮೂಲಕ ಭರ್ಜರಿ ಪರಿಹಾರ ಹಣ ಸಿಗಲಿದೆ. ಈ ಮೂಲಕ ಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಹಾಗಿದ್ರೆ, ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.? ಹೇಗೆ ಅರ್ಜಿ ಸಲ್ಲಿಸಬೇಕು? ಇದಕ್ಕೆ ಬೇಕಾಗಿರುವ ದಾಖಲೆಗಳೇನು ಎನ್ನುವ ಪ್ರಮುಖ ಮಾಹಿತಿ ತಿಳಿಯಲು ಮುಂದೆ ಓದಿ.

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?

• ರಾಜ್ಯದ ಎಲ್ಲಾ ಸಣ್ಣ, ಅತಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಭೂಮಿ ಹೊಂದಿರುವ ಕೃಷಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

• ಬ್ಯಾಂಕುಗಳಲ್ಲಿ ಕೃಷಿ ಸಾಲ (Loanee Farmers) ಪಡೆದಿರುವ ಮತ್ತು ಸಾಲ ಪಡೆಯದ (Non-Loanee Farmers) ಇಬ್ಬರೂ ರೈತರು ಬೆಳೆ ವಿಮೆ ಮಾಡಿಸಲು ಅರ್ಹರಾಗಿದ್ದಾರೆ.

ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.!
ರೈತ ಬಾಂಧವರು ತಮ್ಮ ಕೃಷಿ ಬೆಳೆಗಳಿಗೆ ವಿಮಾ ರಕ್ಷಣೆ ಪಡೆದುಕೊಳ್ಳಲು ಮತ್ತು ನಷ್ಟದ ಸಮಯದಲ್ಲಿ ಪರಿಹಾರದ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  1. ರೈತರ ಅಧಿಕೃತ ಆಧಾರ್ ಕಾರ್ಡ್ (Aadhar Card).
  2. ಜಮೀನಿನ ಇತ್ತೀಚಿನ ಪಹಣಿ ಅಥವಾ ಆರ್ ಸಿ ಸಿ (RTC / Pahani).
  3. ಬ್ಯಾಂಕ್ ಖಾತೆಯ ಪಾಸ್ಬುಕ್ ಪ್ರತಿ (ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಾಗಿ ಸೀಡಿಂಗ್ ಆಗಿರಬೇಕು).
  4. ನಿಮ್ಮ ಜಮೀನಿನ ಜಂಟಿ ಖಾತೆಯಾಗಿದ್ದರೆ ಅಥವಾ ಸ್ವಂತದ್ದಾಗಿದ್ದರೆ ಅದಕ್ಕೆ ಸಂಬಂಧಿಸಿದ ಭೂ ದಾಖಲೆಗಳು.
  5. ಕೃಷಿ ಇಲಾಖೆಯಿಂದ ಪಡೆದ ರೈತರ ಗುರುತಿನ ಸಂಖ್ಯೆ ಅಥವಾ ಎಫ್ಐಡಿ (FID – Farmer ID Number).
  6. ನೀವು ಪ್ರಸ್ತುತ ಹೊಲದಲ್ಲಿ ಬಿತ್ತನೆ ಮಾಡಿರುವ ಬೆಳೆಯ ಅಧಿಕೃತ ಇ-ಕ್ರಾಪ್ (E-Crop) ದೃಢೀಕರಣ ಪತ್ರ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ.!
ಅರ್ಹ ರೈತರು ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಧಿಕೃತ ರಾಷ್ಟ್ರೀಯ ಪೋರ್ಟಲ್ ಆದ pmfby.gov.in ಗೆ ಭೇಟಿ ನೀಡಿ ಅತ್ಯಂತ ಸುಲಭವಾಗಿ ಬೆಳೆ ವಿಮೆ ನೋಂದಣಿಯನ್ನು ಪೂರ್ಣಗೊಳಿಸಬಹುದು.

ಪೋರ್ಟಲ್ ಓಪನ್ ಮಾಡಿದ ನಂತರ ‘Farmer Corner’ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬೇಕು. ನಂತರ ನಿಮ್ಮ ಜಮೀನಿನ ವಿವರ, ಜಿಲ್ಲೆ, ತಾಲ್ಲೂಕು, ಗ್ರಾಮ ಮತ್ತು ಪ್ರಸ್ತುತ ಬೆಳೆದಿರುವ ಬೆಳೆಯ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಕೊನೆಯದಾಗಿ ನಿಗದಿತ ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತವನ್ನು ಆನ್‌ಲೈನ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿಸಿ ರಶೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ರೈತರು ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ ಅಥವಾ ಸಹಕಾರಿ ಬ್ಯಾಂಕುಗಳಿಗೆ ಭೇಟಿ ನೀಡಿಯೂ ನೋಂದಣಿ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *