LifestyleNational

ಖಾಲಿ ಹೊಟ್ಟೆಯಲ್ಲಿ ದಿನಾಲೂ ‘ಉಗುರುಬೆಚ್ಚಗಿನ ನೀರು’ ಕುಡಿದ್ರೆ ಏನಾಗುತ್ತೆ ಗೊತ್ತಾ? 90% ಜನರಿಗೆ ಇದರ ಅಸಲಿ ಲಾಭ ತಿಳಿದಿಲ್ಲ!

Spread the love

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್: ನಮ್ಮ ಭಾರತೀಯ ಸಾಂಪ್ರದಾಯಿಕ ಆರೋಗ್ಯ ಪದ್ಧತಿ ಹಾಗೂ ಆಧುನಿಕ ವೈದ್ಯಕೀಯ ವಿಜ್ಞಾನ ಎರಡರ ಪ್ರಕಾರವೂ ಮುಂಜಾನೆ ಎದ್ದ ತಕ್ಷಣ ನೀರು ಕುಡಿಯುವುದು ಅತ್ಯಂತ ಒಳ್ಳೆಯ ಅಭ್ಯಾಸ. ಆದರೆ, ಬೆಳಿಗ್ಗೆ ಎದ್ದ ತಕ್ಷಣ ಸಾಮಾನ್ಯ ನೀರು ಕುಡಿಯುವುದಕ್ಕಿಂತ, ದಿನಾಲೂ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು (Warm Water) ಕುಡಿಯುವುದರಿಂದ ನಮ್ಮ ದೇಹಕ್ಕೆ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ.

90%ಕ್ಕೂ ಹೆಚ್ಚು ಜನರಿಗೆ ಬಿಸಿನೀರು ಕುಡಿಯುವ ಸರಿಯಾದ ವಿಧಾನ ಮತ್ತು ಅದರ ಅಸಲಿ ತಾಂತ್ರಿಕ ಲಾಭಗಳು ತಿಳಿದಿರುವುದಿಲ್ಲ. ಆ ಪ್ರಮುಖ ಆರೋಗ್ಯ ರಹಸ್ಯಗಳು ಇಲ್ಲಿವೆ:

1. ಜೀರ್ಣಕ್ರಿಯೆ ಸೂಪರ್ ಫಾಸ್ಟ್ ಆಗುತ್ತೆ : ಬೆಳಿಗ್ಗೆ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ಜಠರದಲ್ಲಿರುವ ಜೀರ್ಣಕಾರಿ ಎಂಜೈಮ್‌ಗಳು ಸಕ್ರಿಯಗೊಳ್ಳುತ್ತವೆ. ಇದು ರಾತ್ರಿ ತಿಂದ ಆಹಾರವು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ ಹಾಗೂ ದೀರ್ಘಕಾಲದ ಮಲಬದ್ಧತೆ (Constipation) ಸಮಸ್ಯೆಯನ್ನು ಕೇವಲ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಿವಾರಿಸುತ್ತದೆ.

2. ದೇಹದ ಕಸ ಹೊರಹಾಕುತ್ತದೆ (Detoxification) : ಬಿಸಿನೀರು ಕುಡಿದಾಗ ನಮ್ಮ ದೇಹದ ಉಷ್ಣತೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿ ಬೆವರಿನ ರೂಪದಲ್ಲಿ ಮತ್ತು ಮೂತ್ರದ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳು (Toxins) ಅತ್ಯಂತ ಸುಲಭವಾಗಿ ಹೊರಹೋಗುತ್ತವೆ. ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡುತ್ತದೆ.

3. ತೂಕ ಇಳಿಸಿಕೊಳ್ಳಲು ರಾಮಬಾಣ : ನೀವು ದೇಹದ ಬೊಜ್ಜು ಅಥವಾ ತೂಕ ಇಳಿಸಿಕೊಳ್ಳಲು (Weight Loss) ಬಯಸುತ್ತಿದ್ದರೆ, ದಿನಾಲೂ ಬೆಳಿಗ್ಗೆ ಬಿಸಿನೀರಿಗೆ ಅರ್ಧ ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ದೇಹದ ಮೆಟಬಾಲಿಸಂ ದರವನ್ನು ಹೆಚ್ಚಿಸಿ, ಬೇಡದ ಕೊಬ್ಬನ್ನು ಕರಗಿಸಲು ವೇಗವಾಗಿ ಸಹಾಯ ಮಾಡುತ್ತದೆ.

4. ಮಲಬದ್ಧತೆ ನಿವಾರಣೆ : ಬಹಳಷ್ಟು ಜನರು ಮಲಬದ್ಧತೆ ಸಮಸ್ಯೆಯನ್ನ ಎದುರಿಸುತ್ತಿರುತ್ತಾರೆ. ಅಂತಹವರಿಗೆ ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದ್ರಿಂದ ಕರುಳಿನ ಚಲನೆ ಸುಗಮಗೊಳ್ಳುತ್ತದೆ. ಈ ಮೂಲಕ ಮಲಬದ್ಧತೆ ಸಮಸ್ಯೆಗೆ ಉತ್ತಮ ಪರಿಹಾರ ಸಿಗುತ್ತದೆ.

5. ರಕ್ತ ಪರಿಚಲನೆ ಮತ್ತು ರೋಗನಿರೋಧಕ ಶಕ್ತಿ : ಬಿಸಿನೀರು ಕುಡಿಯುವುದರಿಂದ ರಕ್ತನಾಳಗಳು ವಿಸ್ತರಣೆಗೊಂಡು ಇಡೀ ದೇಹಕ್ಕೆ ರಕ್ತ ಪರಿಚಲನೆ (Blood Circulation) ಉತ್ತಮಗೊಳ್ಳುತ್ತದೆ. ಇದು ಸ್ನಾಯುಗಳ ಸೆಳೆತ ಮತ್ತು ತಲೆನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಶಕ್ತಿ ಮತ್ತು ಚೈತನ್ಯ : ಖಾಲಿ ಹೊಟ್ಟೆಯಲ್ಲಿ ಉರುಗು ಬೆಚ್ಚಗಿನ ನೀರು ಕುಡಿಯುವುದರಿಂದ ಬೆಳಗ್ಗೆ ಎದ್ದ ಕೂಡಲೇ ದೇಹಕ್ಕೆ ಅಗತ್ಯವಿರುವ ಜಲಾಂಶ ಸಿಗುತ್ತದೆ. ಇದ್ರಿಂದ ದಿನವಿಡೀ ಚುರುಕಾಗಿರಲು ನೆರವಾಗುತ್ತದೆ. ಇದು ದೇಹದಲ್ಲಿ ಶಕ್ತಿ ಮತ್ತು ಚೈತನ್ಯ ತುಂಬುವ ಕೆಲಸ ಮಾಡುತ್ತದೆ.

    ಉಗುರುಬೆಚ್ಚಗಿನ ನೀರನ್ನು ಕುಡಿಯುವ ಸರಿಯಾದ ನಿಯಮಗಳು ಮತ್ತು ಮುನ್ನೆಚ್ಚರಿಕೆ!

    ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರನ್ನು ಸೇವಿಸುವಾಗ ನೀರಿನ ತಾಪಮಾನವು ಅತಿಯಾಗಿ ಬಿಸಿಯಾಗಿರಬಾರದು, ಕೇವಲ ಹಗುರವಾದ ಉಷ್ಣತೆಯನ್ನು ಹೊಂದಿರಬೇಕು. ಬೆಳಿಗ್ಗೆ ಎದ್ದ ತಕ್ಷಣ ಕುಳಿತುಕೊಂಡು ನಿಧಾನವಾಗಿ ನೀರನ್ನು ಕುಡಿಯುವುದು ಆಯುರ್ವೇದದ ಪ್ರಕಾರ ಅತ್ಯಂತ ಉತ್ತಮ ಕ್ರಮವಾಗಿದೆ. ಚಳಿಗಾಲದ ಈ ಸಮಯದಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಸರಳ ಹವ್ಯಾಸವು ರಾಮಬಾಣವಾಗಿ ಕೆಲಸ ಮಾಡುತ್ತದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನಶೈಲಿಯಲ್ಲಿ ಇಂತಹ ಪುಟ್ಟ ನೈಸರ್ಗಿಕ ಮನೆಮದ್ದುಗಳನ್ನು ರೂಢಿಸಿಕೊಂಡರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೀರ್ಘಕಾಲದವರೆಗೆ ಆರೋಗ್ಯವಾಗಿರಬಹುದು. ಹೆಚ್ಚಿನ ಆರೋಗ್ಯಕರ ಸಲಹೆಗಳಿಗಾಗಿ ನಮ್ಮ ಸುದ್ದಿತಾಣವನ್ನು ದಿನಾಲೂ ಭೇಟಿ ಮಾಡಿ.

    Leave a Reply

    Your email address will not be published. Required fields are marked *