ಸಾವಿರಾರು ರೂಪಾಯಿ ಖರ್ಚು ಮಾಡಿದ್ರೂ ‘ತುರಿಕೆ’ ಕಮ್ಮಿಯಾಗ್ತಿಲ್ವಾ? ಈ ‘ತೈಲ’ದಿಂದ ತಕ್ಷಣ ಪರಿಹಾರ!
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ತುರಿಕೆ ಎನ್ನುವುದು ಅನೇಕ ಜನರನ್ನ ಕಾಡುವ ಸಾಮಾನ್ಯ ಸಮಸ್ಯೆ. ಈ ತುರಿಕೆ ಹೆಚ್ಚಾಗಿ ಬೆವರುವ ಪ್ರದೇಶಗಳಾದ ತೊಡೆಸಂದು, ಪೃಷ್ಠ ಮತ್ತು ಕಂಕುಳಲ್ಲಿ ಕಂಡು ಬರುತ್ತದೆ. ತುರಿಕೆಗೆ ಮುಖ್ಯ ಕಾರಣವೆಂದರೆ ಬೆವರು ಸಂಗ್ರಹವಾಗುವುದು, ಇದು ಗಾಳಿಯಲ್ಲಿರುವ ಶಿಲೀಂಧ್ರ ಸೂಕ್ಷ್ಮಜೀವಿಗಳು ಪ್ರವೇಶಿಸಲು ಅನುವು ಮಾಡಿ ಕೊಡುತ್ತದೆ ಮತ್ತು ಶಿಲೀಂಧ್ರಗಳ ಸೋಂಕನ್ನ ಉಂಟು ಮಾಡುತ್ತದೆ.
ಕೆರೆದುಕೊಳ್ಳುವುದ್ರಿಂದ ತುರಿಕೆಯಿಂದ ತಾತ್ಕಾಲಿಕ ಪರಿಹಾರವನ್ನ ನೀಡಬಹುದಾದರೂ, ಅದು ಚರ್ಮದ ಸೂಕ್ಷ್ಮ ಪದರಗಳನ್ನ ಹಾನಿಗೊಳಿಸುತ್ತದೆ. ಕೆರೆಯುವುದು ಹುಣ್ಣುಗಳು ಮತ್ತು ಸೋಂಕುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ನಿದ್ದೆಯಲ್ಲಿ ಕೆರೆದುಕೊಳ್ಳುವುದ್ರಿಂದ ಚರ್ಮಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ.
ಸ್ನಾನ : ತುರಿಕೆ ಇರುವವರು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ನಾನ ಮಾಡುವುದು ಅತ್ಯಗತ್ಯ. ಮನೆಯಲ್ಲಿ ಇರುವವರು ಮಧ್ಯಾಹ್ನ ಸ್ನಾನ ಮಾಡುವುದು ಸಹ ಒಳ್ಳೆಯದು. ಸ್ನಾನ ಮಾಡುವಾಗ, ತುರಿಕೆ ಹೆಚ್ಚು ಇರುವ ಪ್ರದೇಶಗಳನ್ನ ಚೆನ್ನಾಗಿ ತೊಳೆಯಬೇಕು. ಇನ್ನು ತುರಿಕೆ ಇರುವವರು ಯಾವಾಗಲೂ ತಮ್ಮ ಉಗುರುಗಳನ್ನ ಚಿಕ್ಕದಾಗಿ ಕತ್ತರಿಸಬೇಕು.
ಉಗುರುಗಳಿಂದ ಕೆರೆದುಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗುವುದು, ಸೂಕ್ಷ್ಮಜೀವಿಗಳು ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತದೆ ಮತ್ತು ಸೋಂಕಿನ ಅಪಾಯವನ್ನ ಹೆಚ್ಚಿಸುತ್ತದೆ. ನಿಮ್ಮ ಉಗುರುಗಳನ್ನು ಕೆರೆದುಕೊಳ್ಳದಂತೆ ಎಚ್ಚರವಹಿಸಿ. ನಿಯಮಿತವಾಗಿ ಸ್ನಾನ ಮಾಡಿ ಮತ್ತು ಬೆವರು ಬರುವ ಪ್ರದೇಶಗಳನ್ನ ಸ್ವಚ್ಛಗೊಳಿಸಿ.
ತುರಿಕೆ ನಿವಾರಿಸುವಲ್ಲಿ ಪುದೀನಾ ಎಣ್ಣೆ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಆನ್‌ಲೈನ್’ನಲ್ಲಿ ಸುಲಭವಾಗಿ ಲಭ್ಯವಿರುವ ಈ ಎಣ್ಣೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಅರ್ಧ ಚಮಚ ತೆಂಗಿನ ಎಣ್ಣೆಯಲ್ಲಿ ಎರಡು ಹನಿ ಪುದೀನಾ ಎಣ್ಣೆಯನ್ನ ಬೆರೆಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ. ಇದು ಕಿರಿಕಿರಿಯನ್ನ ಕಡಿಮೆ ಮಾಡುತ್ತದೆ ಮತ್ತು ತುರಿಕೆಯಿಂದ ಪರಿಹಾರ ನೀಡುತ್ತದೆ. ಒಂದು ಹನಿ ಪುದೀನಾ ಎಣ್ಣೆಯನ್ನ ನೇರವಾಗಿ ತೆಗೆದುಕೊಂಡು ತುರಿಕೆ ಇರುವ ಜಾಗಕ್ಕೆ ಮಾತ್ರ ಹಚ್ಚಿ. ಯಾಕಂದ್ರೆ, ಬೇರೆ ಜಾಗಕ್ಕೆ ಹರಡಿದ್ರೆ ಉರಿ ಉಂಟಾಗುತ್ತದೆ.